alex Certify ಇಂದು ಚೆನ್ನೈ ಸೂಪರ್‌ಕಿಂಗ್ಸ್ – ಪಂಜಾಬ್ ಕಿಂಗ್ಸ್ ಹಣಾಹಣಿ: ಉಭಯ ತಂಡಗಳ ನಾಯಕರ ನಡುವೆ ಇದೆ ಈ ಸಾಮ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಚೆನ್ನೈ ಸೂಪರ್‌ಕಿಂಗ್ಸ್ – ಪಂಜಾಬ್ ಕಿಂಗ್ಸ್ ಹಣಾಹಣಿ: ಉಭಯ ತಂಡಗಳ ನಾಯಕರ ನಡುವೆ ಇದೆ ಈ ಸಾಮ್ಯತೆ

ಇಂದು ಐಪಿಎಲ್ ನ 8ನೇ ಪಂದ್ಯದಲ್ಲಿ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ‌ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡ ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಎರಡು ತಂಡದ ನಾಯಕರು ವಿಕೆಟ್ ಕೀಪರ್ ಗಳೇ ಆಗಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ ಪ್ರತಿ ಐಪಿಎಲ್ ನಲ್ಲಿ ಬಲಿಷ್ಠ ತಂಡ ಹೊಂದಿದ್ದರು ಇದುವರೆಗೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಈಗಾಗಲೇ ಈ ಬಾರಿ ಐಪಿಎಲ್ ನಲ್ಲಿ ತನ್ನ ಮೊದಲನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 4ರನ್ ಗಳಿಂದ ರೋಚಕ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ದೀಪಕ್ ಹೂಡಾ ಅಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.

ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್

ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಅವರ ಬಿರುಸಿನ ಬ್ಯಾಟಿಂಗ್ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದ್ದು ಈ ಪಂದ್ಯದಲ್ಲಿ ಜಯ ಗಳಿಸುತ್ತಾ ಕಾದು ನೋಡಬೇಕಾಗಿದೆ. ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬಲಿಷ್ಠ ಬ್ಯಾಟ್ಸ್ ಮನ್ ಗಳನ್ನು ಒಳಗೊಂಡಿದ್ದು ಇಂದು ಹೈವೋಲ್ಟೆಜ್ ಪಂದ್ಯ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...