alex Certify ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್‌ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿದ ಕಳ್ಳ: ವಿಡಿಯೋ ವೈರಲ್

ಫುಟ್ಬಾಲ್ ಶೈಲಿ ಟ್ಯಾಕಲ್‌ನಿಂದ 80 ಲಕ್ಷ ರೂ.ಗಳೊಂದಿಗೆ ಪರಾರಿಯಾಗಲು ನೋಡುತ್ತಿದ್ದ ಕಳ್ಳನೊಬ್ಬನನ್ನು ಹಿಡಿದುಕೊಟ್ಟ ಕೇರಳ ಮೂಲದ ವ್ಯಕ್ತಿಯೊಬ್ಬರು ಸದ್ದು ಮಾಡುತ್ತಿದ್ದಾರೆ.

ನೀವು ಫುಟ್ಬಾಲ್ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮನ್ನು ಇಂಪ್ರೆಸ್ ಮಾಡುತ್ತದೆ. ದುಬಾಯ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದ್ದು ವೈರಲ್‌ ಆಗಿದೆ.

ಪೊಲೀಸ್​ ಅಧಿಕಾರಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್

ಕೋಯಿಕ್ಕೋಡ್ ಮೂಲದ ಜಾಫರ್‌ ಪರಾಪೂರತ್‌ ಎಂಬ ಈ ವ್ಯಕ್ತಿ ತನ್ನ ಅಂಕಲ್‌ನ ಕೆಫೆಯ ಬಳಿ ಕಳ್ಳನೊಬ್ಬ ನಗದಿನೊಂದಿಗೆ ಓಡಿ ಹೋಗುತ್ತಿರುವುನ್ನು ನೋಡಿದ್ದಾರೆ. ಜನರ ಗುಂಪೊಂದು ಆ ಕಳ್ಳನನ್ನು ಚೇಸ್ ಮಾಡುತ್ತಿರುವುದನ್ನು ಆತ ಕಂಡಿದ್ದಾರೆ. ತನ್ನತ್ತ ಓಡಿಬಂದ ಕಳ್ಳನನ್ನು ಜಾಫರ್‌‌ ಫುಟ್‌ಬಾಲ್ ಶೈಲಿಯ ಕಿಕ್‌ನಿಂದ ನೆಲಕ್ಕುರುಳಿಸಿದ್ದಾರೆ. ಕೂಡಲೇ ಆತನ ಹಿಂದೆ ಅಟ್ಟಿಸಿಕೊಂಡು ಬರುತ್ತಿದ್ದ ಮಂದಿ ಆತನನ್ನು ಹಿಡಿಯಲು ಸಫಲರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...