alex Certify BIG NEWS: ಜಿಂಬಾಬ್ವೆ ಬೌಲರ್ ರಾಯ್ ಕೈಯಾ ಅಮಾನತುಗೊಳಿಸಿದ ಐಸಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಿಂಬಾಬ್ವೆ ಬೌಲರ್ ರಾಯ್ ಕೈಯಾ ಅಮಾನತುಗೊಳಿಸಿದ ಐಸಿಸಿ

ದುಬೈ: ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್ ರಾಯ್ ಕೈಯಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಿಂದ ಐಸಿಸಿ ಅಮಾನತುಗೊಳಿಸಿದೆ. ರಾಯ್ ಕೈಯಾ ಅವರ ಬೌಲಿಂಗ್ ಕ್ರಮ ಕಾನೂನುಬಾಹಿರ ಎಂದು ಪರಿಗಣಿಸಿದ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ.

29 ವರ್ಷದ ಆಫ್-ಸ್ಪಿನ್ನರ್ ಆಗಿರುವ ರಾಯ್ ಕೈಯಾ ಜಿಂಬಾಬ್ವೆ ಕ್ರಿಕೆಟ್ ನ ಪೂರ್ವಾನುಮತಿಯ ನಂತರ ದೇಶೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಬಹುದು ಎಂದು ಐಸಿಸಿ ಹೇಳಿದೆ.

ಜುಲೈ 7-11ರ ವರೆಗೆ ಹರಾರೆಯಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್ ನಲ್ಲಿ ಕೈಯಾ ಅನುಮಾನಾಸ್ಪದ ರೀತಿಯಲ್ಲಿ ಬೌಲಿಂಗ್ ಮಾಡಿದ್ದರು ಎಂದು ಹೇಳಲಾಗಿದೆ. ಕ್ರಿಕೆಟ್ ಉನ್ನತಾಧಿಕಾರ ಸಮಿತಿಯು ಕೈಯಾ ಬೌಲಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಿದೆ. ಬೌಲಿಂಗ್ ಕ್ರಮವು ಕಾನೂನುಬಾಹಿರವಾಗಿದೆ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಐಸಿಸಿ ಕೈಯಾ ಅವರನ್ನು ಅಮಾನತುಗೊಳಿಸಿದೆ.

BIG BREAKING: ಕಾಂಗ್ರೆಸ್ ನತ್ತ ಮುಖ ಮಾಡಿದ ಜಿ.ಟಿ.ದೇವೇಗೌಡ; ಅಧಿಕೃತ ಘೋಷಿಸಿದ JDS ಶಾಸಕ

ಇನ್ನು ಐಸಿಸಿ ನಿಯಮಗಳಿಗೆ ಅನುಸಾರವಾಗಿ ತನ್ನ ಬೌಲಿಂಗ್ ಕ್ರಮವನ್ನು ಮಾರ್ಪಡಿಸಿದ ನಂತರ ಕೈಯಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಐಸಿಸಿ ತಿಳಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...