alex Certify ʼಪುಷ್ಪ: ದಿ ರೈಸ್‌ʼ ಅನುಕರಣೆ ಈಗ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಸರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪುಷ್ಪ: ದಿ ರೈಸ್‌ʼ ಅನುಕರಣೆ ಈಗ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಸರದಿ

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್‌ʼ ಸಿನಿಮಾದ ಹಾಡುಗಳ ಟ್ರೆಂಡ್ ಇಂಟರ್ನೆಟ್ ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಹಾಡಿನ ಬೀಟ್ಸ್ ಗೆ ಇನ್ಸ್ಟಾಗ್ರಾಂ ಬಳಕೆದಾರರು ಇನ್ನೂ ಕೂಡ ಸ್ಟೆಪ್ಸ್ ಹಾಕುತ್ತಿದ್ದಾರೆ. ಸಿನಿಮಾದ ಶ್ರೀವಲ್ಲಿ ಮತ್ತು ಸಾಂಪ್ರದಾಯಿಕ ಡೈಲಾಗ್‌ಗಳು ಜನರ ಮೆಚ್ಚುಗೆಯನ್ನು ಗಳಿಸಿದೆ.

ಸೆಲೆಬ್ರಿಟಿಗಳು, ಪ್ರಭಾವಿಗಳು ಸೇರಿದಂತೆ ಹಲಾವರು ಮಂದಿ ಅರ್ಜುನ್‌ರ ಝುಕೇಗಾ ನಹಿ ಡೈಲಾಗ್‌ನಲ್ಲಿ ಸಿಗ್ನೇಚರ್ ಗಡ್ಡವನ್ನು ತೋರುವ ಶೈಲಿಯನ್ನು ತಾವು ಕೂಡ ಪ್ರಯತ್ನಿಸಿದ್ದಾರೆ. ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಕೂಡ ಈ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ.

ಈ ಹಿಂದೆ ಕ್ರಿಕೆಟಿಗರಾದ ಡೇವಿಡ್ ವಾರ್ನರ್, ರವೀಂದ್ರ ಜಡೇಜಾ ಮತ್ತು ಶಿಖರ್ ಧವನ್ ಈ ಡೈಲಾಗ್ ನ ಲಿಪ್ ಸಿಂಕ್ ಮಾಡಿ ಖ್ಯಾತರಾಗಿದ್ದರು. ಇದೀಗ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಚಹಾಲ್ ಝುಕೆಗಾ ನಹಿ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಚಾಹಲ್ ಅವರನ್ನು ಕಾಪಿ ಕ್ಯಾಟ್ ಅಂತಾ ಕರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...