alex Certify ಹೆರಿಗೆಯಾದ ಕೆಲ ದಿನಗಳಲ್ಲಿ ಸೆಕ್ಸ್​ ಮಾಡಬಹುದಾ..? ಮಹಿಳೆಯರ ಗೊಂದಲಕ್ಕೆ ಇಲ್ಲಿದೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆರಿಗೆಯಾದ ಕೆಲ ದಿನಗಳಲ್ಲಿ ಸೆಕ್ಸ್​ ಮಾಡಬಹುದಾ..? ಮಹಿಳೆಯರ ಗೊಂದಲಕ್ಕೆ ಇಲ್ಲಿದೆ ಉತ್ತರ

ಹೆರಿಗೆಯಾದ ಬಳಿಕ ಮಹಿಳೆಯರು ಅನೇಕ ವಿಷಯಗಳ ಕಡೆ ಗಮನ ನೀಡಲೇಬೇಕು. ಈ ಸಮಯದಲ್ಲಿ ಹಾರ್ಮೋನ್​ ಬದಲಾವಣೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿಡಬೇಕು.

ಮಹಿಳೆಯರು ಹೆರಿಗೆಯಾಗಿ ಕನಿಷ್ಟ ಆರು ವಾರಗಳಾದರೂ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಬಾರದು. ನಿಮ್ಮ ಗರ್ಭಕೋಶ ಹಾಗೂ ಯೋನಿಯು ಸುಧಾರಿಸಿಕೊಳ್ಳಲು ಕನಿಷ್ಟ ನಾಲ್ಕರಿಂದ ಆರು ವಾರಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಆರು ವಾರಗಳ ಕಾಲ ಕಾಯುವುದು ಉತ್ತಮ.

ಹೆರಿಗೆಯಾದ ಬಳಿಕ ಮಗುವಿನ ಆರೈಕೆ ಹಾಗೂ ಸ್ವಯಂ ಆರೈಕೆಗೆ ಮಹಿಳೆಯು ಮೊದಲ ಆದ್ಯತೆ ನೀಡಬೇಕು. ಹೀಗಾಗಿ ಲೈಂಗಿಕ ಆಸಕ್ತಿಯ ವಿಚಾರಗಳಲ್ಲಿ ಬ್ರೇಕ್​ ತೆಗೆದುಕೊಳ್ಳುವುದೇ ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಹೆರಿಗೆಯ ಬಳಿಕ ಅನೇಕ ಸಮಯಗಳ ಕಾಲ ಮಹಿಳೆಯರಿಗೆ ಋತುಚಕ್ರ ಸಂಭವಿಸುವುದಿಲ್ಲ. ಹೀಗಾಗಿ ಅನೇಕರು ಯಾವುದೇ ಸುರಕ್ಷೆಯಿಲ್ಲದೇ ಲೈಂಗಿಕ ಕ್ರಿಯೆಗೆ ಮುಂದಾಗುತ್ತಾರೆ. ಆದರೆ ಮಗುವಿಗೆ ಜನ್ಮ ನೀಡಿದ ಕೆಲವೇ ಸಮಯಗಳಲ್ಲೂ ನೀವು ಗರ್ಭಿಣಿಯಾಗುತ್ತೀರಿ.

ಬಾಣಂತಿಯಾಗಿದ್ದಾಗ ಯಾವಾಗಲೂ ಅಲ್ಲದೇ ಇದ್ದರೂ ಆಗಾಗ ಅಂಡೋತ್ಪತ್ತಿ ಆಗುತ್ತದೆ. ಈ ಸಂದರ್ಭದಲ್ಲಿ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕಾಂಡೋಮ್​ಗಳ ಬಳಕೆ ಮಾಡುವುದು ಸೂಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...