alex Certify ‘ಸ್ಮಾರ್ಟ್​ ಫೋನ್’ ಕದಿಯಲು ಯತ್ನಿಸಿದ ಕಿಲಾಡಿ ಮಂಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ಮಾರ್ಟ್​ ಫೋನ್’ ಕದಿಯಲು ಯತ್ನಿಸಿದ ಕಿಲಾಡಿ ಮಂಗ….!

ಆಧುನಿಕ ತಂತ್ರಜ್ಞಾನದ ವ್ಯಾಮೋಹವು ಪ್ರಾಣಿಗಳ ಮೇಲೂ ಹೇಗೆ ಪರಿಣಾಮ ಬೀರಿರಬಹುದು ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ಮಂಗವೊಂದು ತನ್ನ ಮರಿಯೊಂದಿಗೆ ಕುಳಿತಿದ್ದು, ಆ ಮರಿ ಮಂಗ ಎದುರಿದ್ದವರಿಂದ ಮೊಬೈಲ್​ ಕಸಿದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತ ನಂದಾ ಹಂಚಿಕೊಂಡಿದ್ದಾರೆ.

ಕ್ಲಿಪ್​ ಅನ್ನು ಅಭಯಾರಣ್ಯದಲ್ಲಿ ಸೆರೆ ಹಿಡಿಯಲಾಗಿದೆ ಎಂದು ತೋರುತ್ತದೆ, ಅಲ್ಲಿ ದಾರಿಹೋಕನು ಮಂಗದ ಫೋಟೋವನ್ನು ತೆಗೆದುಕೊಳ್ಳಲು ಬಯಸಿದ್ದಾನೆ. ಆ ವ್ಯಕ್ತಿ ಫೋಟೋ ಕ್ಲಿಕ್ಕಿಸಲು ಮರಿ ಕೋತಿಗೆ ಹತ್ತಿರವಾಗುತ್ತಾನೆ ಮತ್ತು ಮರಿ ಕೋತಿ ಮೊಬೈಲ್​ ಕಸಿದುಕೊಳ್ಳಲು ಪ್ರಯತ್ನಿಸುತ್ತದೆ.

ವಿಡಿಯೋ ನೋಡಿದರೆ, ಕೋತಿ ಮರಿಯು ಮೊಬೈಲ್​ ಫೋನ್​ನೊಂದಿಗೆ ಆಟವಾಡಲು ಸಾಕಷ್ಟು ಪ್ರಯತ್ನಿಸುತ್ತದೆ. ಆದರೆ ತಾಯಿ ಮಂಗ ತನ್ನ ಮರಿಯನ್ನು ಅದರಿಂದ ದೂರಕ್ಕೆ ಎಳೆದುಕೊಂಡಿರುವುದು ಪಾಠ ಮಾಡಿದಂತಿದೆ. ಕ್ಲಿಪ್​ನೊಂದಿಗೆ ಹಂಚಿಕೊಳ್ಳಲಾದ ಉಲ್ಲಾಸದ ಶೀರ್ಷಿಕೆ ಗಮನ ಸೆಳೆಯುತ್ತಿದೆ.

ವಿಡಿಯೋ ವೀಕ್ಷಿಸಿದ ನಂತರ, ಅನೇಕರು ಕಾಮೆಂಟ್​ ಮಾಡಿದ್ದಾರೆ, ತಾಯಿ ತನ್ನ ಚಿಕ್ಕ ಮಗುವಿಗೆ ಅದು ಅಪಾಯಕಾರಿ ಎಂದು ಎಚ್ಚರಿಸುವ ರೀತಿ ನನಗೆ ಇಷ್ಟವಾಗಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...