alex Certify WWE​ ಸ್ಟಾರ್ ಇನ್​ಸ್ಟಾಗ್ರಾಂ ಪೋಸ್ಟ್​ ಕಂಡು ಭಾವುಕರಾದ ಭಾರತೀಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WWE​ ಸ್ಟಾರ್ ಇನ್​ಸ್ಟಾಗ್ರಾಂ ಪೋಸ್ಟ್​ ಕಂಡು ಭಾವುಕರಾದ ಭಾರತೀಯರು..!

ಹೃದಯಾಘಾತದಿಂದ ಮೃತಪಟ್ಟ ಹಿಂದಿ ನಟ ಸಿದ್ಧಾರ್ಥ್​ ಶುಕ್ಲಾರ ಸಾವು ಸಂಪೂರ್ಣ ಬಾಲಿವುಡ್​ ಲೋಕದಲ್ಲೇ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಚಿಕ್ಕ ವಯಸ್ಸಿನಲ್ಲೇ ವಿಧಿಯಾಟಕ್ಕೆ ಬಲಿಯಾದ ನಟನ ಆತ್ಮಕ್ಕೆ ಶಾಂತಿ ಕೋರಿ ಸಾಕಷ್ಟು ತಾರೆಯರು ಸಿದ್ಧಾರ್ಥ್​ರ ಫೋಟೋವನ್ನು ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ.

ಕೇವಲ ಭಾರತೀಯ ತಾರೆಯರು ಮಾತ್ರವಲ್ಲದೇ ವಿದೇಶಿ ಸೆಲೆಬ್ರಿಟಗಳೂ ಕೂಡ ಸಿದ್ದಾರ್ಥ್​ ಶುಕ್ಲಾ ಸಾವಿಗೆ ಸೋಶಿಯಲ್​ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.

BIG NEWS: ಅಪ್ಘನ್​ ಸರ್ಕಾರದ ಇ ಮೇಲ್​ ಖಾತೆಗಳನ್ನು ಲಾಕ್​ ಮಾಡಿದ ಗೂಗಲ್​ ಸಂಸ್ಥೆ

ಡಬ್ಲು ಡಬ್ಲು ಇ ಇಂಟರ್​ನ್ಯಾಷನಲ್​ ಸ್ಟಾರ್​ ಜಾನ್​ಸೀನಾ ಕೂಡ ಇನ್​ಸ್ಟಾಗ್ರಾಂನಲ್ಲಿ ಸಿದ್ಧಾರ್ಥ್​ ಶುಕ್ಲಾರ ಫೋಟೋವನ್ನು ಶೇರ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ನಿನ್ನೆಯಷ್ಟೇ ಸಿದ್ಧಾರ್ಥ್​ ಶುಕ್ಲಾರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನೆರವೇರಿಸಲಾಗಿತ್ತು.

ಜಾನ್​ಸೀನಾರ ಈ ಪೋಸ್ಟ್​​​ನಿಂದ ಸೀನಾ ಭಾರತೀಯ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಅನೇಕರು ಸಿದ್ಧಾರ್ಥ್​ಗೆ ಸಂತಾಪ ಸೂಚಿಸಿದ ಜಾನ್​ಸೀನಾಗೆ ಧನ್ಯವಾದ ಅರ್ಪಿಸಿದ್ದಾರೆ. ಅನೇಕರು ಜಾನ್​ ಸೀನಾ ಒಬ್ಬ ಶ್ರೇಷ್ಟ ವ್ಯಕ್ತಿ ಎಂದು ಹಾಡಿ ಹೊಗಳಿದ್ದಾರೆ.

View this post on Instagram

A post shared by John Cena (@johncena)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...