alex Certify WPL 2023: ಇಲ್ಲಿದೆ ಐದು ಫ್ರಾಂಚೈಸಿ ತಂಡದ ಮಹಿಳಾ ಆಟಗಾರರ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WPL 2023: ಇಲ್ಲಿದೆ ಐದು ಫ್ರಾಂಚೈಸಿ ತಂಡದ ಮಹಿಳಾ ಆಟಗಾರರ ಸಂಪೂರ್ಣ ಪಟ್ಟಿ

ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದು, ಸೋಮವಾರದಂದು ಐದು ಫ್ರಾಂಚೈಸಿ ತಂಡಗಳು ಆಟಗಾರರನ್ನು ಖರೀದಿ ಮಾಡಿವೆ. ಕೆಲವು ಸ್ಟಾರ್ ಆಟಗಾರರಿಗೆ ಅತಿಹೆಚ್ಚಿನ ಮೊತ್ತ ಲಭಿಸಿದೆ.

ಸೋಮವಾರದ ಮಹಿಳಾ ಐಪಿಎಲ್ ಹರಾಜಿನಲ್ಲಿ ಸ್ಮೃತಿ ಮಂದಾನ ಅತಿ ಹೆಚ್ಚು ಅಂದರೆ 3.4 ಕೋಟಿ ರೂಪಾಯಿಗಳಿಗೆ ಹರಾಜಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪೈಪೋಟಿಯಲ್ಲಿ ಅಂತಿಮವಾಗಿ ಸ್ಮೃತಿ ಮಂದಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ.

ಹಾಗೆಯೇ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನು ಖರೀದಿಸಲು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ನಡುವೆ ಪೈಪೋಟಿ ನಡೆದಿದ್ದು ಅಂತಿಮವಾಗಿ 1.8 ಕೋಟಿ ರೂಪಾಯಿಗಳಿಗೆ ಅವರು ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

ವಿದೇಶಿ ಆಟಗಾರರ ಪೈಕಿ ಆಸ್ಟ್ರೇಲಿಯಾದ ಆಶ್ಲೇ ಗಾರ್ಡನರ್ ಹಾಗೂ ಇಂಗ್ಲೆಂಡಿನ ನಟೇಲಿ ಶಿವರ್ ಅತಿ ಹೆಚ್ಚು ಅಂದರೆ ತಲಾ 3.2 ಕೋಟಿ ರೂಪಾಯಿಗಳಿಗೆ ಹರಾಜಾಗಿದ್ದು, ಆಶ್ಲೇ ಗಾರ್ಡನರ್ ಗುಜರಾತ್ ಜಾಯಿಂಟ್ಸ್ ಪರ ಆಡಲಿದ್ದರೆ ನಟೇಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ತಂಡಗಳು, ಆಟಗಾರರು ಹಾಗೂ ಅವರು ಖರೀದಿಯಾದ ಮೊತ್ತದ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಡೆಲ್ಲಿ ಕ್ಯಾಪಿಟಲ್ಸ್‌: ಜೆಮಿಮಾ ರೊಡ್ರಿಗಸ್ (ಭಾರತ) – ರೂ. 2.2 ಕೋಟಿ, ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ) – ರೂ. 1.1 ಕೋಟಿ, ಶಫಾಲಿ ವರ್ಮಾ (ಭಾರತ) – ರೂ. 2 ಕೋಟಿ, ರಾಧಾ ಯಾದವ್ (ಭಾರತ) – ರೂ. 40 ಲಕ್ಷ, ಶಿಖಾ ಪಾಂಡೆ (ಭಾರತ) – ರೂ. 60 ಲಕ್ಷ, ಮರಿಝನ್ನೆ ಕಪ್ (ದ. ಆಫ್ರಿಕಾ) – ರೂ. 1.5 ಕೋಟಿ, ಟಿಟಾಸ್ ಸಾಧು (ಭಾರತ) – ರೂ. 25 ಲಕ್ಷ, ಆಲಿಸ್ ಕ್ಯಾಪ್ಸಿ (ಇಂಗ್ಲೆಂಡ್‌) – ರೂ. 30 ಲಕ್ಷ, ತಾರಾ ನಾರ್ರಿಸ್ (ಅಮೆರಿಕ) – ರೂ. 10 ಲಕ್ಷ, ಲಾರಾ ಹ್ಯಾರಿಸ್ (ಆಸ್ಟ್ರೇಲಿಯಾ) – ರೂ. 45 ಲಕ್ಷ, ಜಸಿಯಾ ಅಖ್ತರ್ (ಭಾರತ) – ರೂ. 20 ಲಕ್ಷ, ಮಿನ್ನು ಮಣಿ (ಭಾರತ) – ರೂ. 30 ಲಕ್ಷ, ತನಿಯಾ ಭಾಟಿಯಾ (ಭಾರತ) – ರೂ. 30 ಲಕ್ಷ, ಪೂನಂ ಯಾದವ್ (ಭಾರತ) – ರೂ.30 ಲಕ್ಷ, ಜೆಸ್ ಜೋನಾಸೆನ್ (ಆಸ್ಟ್ರೇಲಿಯಾ) – ರೂ. 50 ಲಕ್ಷ, ಸ್ನೇಹ ದೀಪ್ತಿ (ಭಾರತ) – ರೂ. 30 ಲಕ್ಷ, ಅರುಂಧತಿ ರೆಡ್ಡಿ (ಭಾರತ) – ರೂ. 30 ಲಕ್ಷ, ಅಪರ್ಣಾ ಮೊಂಡಲ್ (ಭಾರತ) – ರೂ. 10 ಲಕ್ಷ.

ಮುಂಬೈ ಇಂಡಿಯನ್ಸ್:‌ ಹರ್ಮನ್‌ಪ್ರೀತ್ ಕೌರ್ (ಭಾರತ) – ರೂ. 1.8 ಕೋಟಿ, ನಟೇಲಿ ಶೀವರ್ (ಇಂಗ್ಲೆಂಡ್‌) – ರೂ. 3.2 ಕೋಟಿ, ಎಮೆಲಿಯಾ ಕೆರ್ (ನ್ಯೂಜಿಲೆಂಡ್‌) – ರೂ. 1 ಕೋಟಿ, ಪೂಜಾ ವಸ್ತ್ರಕರ್ (ಭಾರತ) – ರೂ. 1.9 ಕೋಟಿ, ಹೆದರ್ ಗ್ರಹಾಂ (ಆಸ್ಟ್ರೇಲಿಯಾ) – ರೂ. 30 ಲಕ್ಷ, ಇಸ್ಸಿ ವಾಂಗ್ (ಇಂಗ್ಲೆಂಡ್) – ರೂ. 30 ಲಕ್ಷ,ಅಮನ್ಜೋತ್ ಕೌರ್ (ಭಾರತ) – ರೂ. 50 ಲಕ್ಷ, ಧಾರಾ ಗುಜ್ಜರ್ (ಭಾರತ) – ರೂ. 10 ಲಕ್ಷ, ಸೈಕಾ ಇಶಾಕ್ (ಭಾರತ) – ರೂ. 10 ಲಕ್ಷ, ಹೇಲಿ ಮ್ಯಾಥ್ಯೂಸ್ (ವಿಂಡೀಸ್) – ರೂ. 40 ಲಕ್ಷ, ಕೊಹ್ಲ್ ಟ್ರಯಾನ್ (ದ. ಆಫ್ರಿಕಾ) – ರೂ. 30 ಲಕ್ಷ, ಹುಮೈರಾ ಕಾಜಿ (ಭಾರತ) – ರೂ. 10 ಲಕ್ಷ, ಪ್ರಿಯಾಂಕ ಬಾಲಾ (ಭಾರತ) – ರೂ. 20 ಲಕ್ಷ, ಸೋನಮ್ ಯಾದವ್ (ಭಾರತ) – ರೂ. 10 ಲಕ್ಷ, ನೀಲಂ ಬಿಷ್ತ್ (ಭಾರತ) – ರೂ. 10 ಲಕ್ಷ, ಜಿಂತಾಮಣಿ ಕಲಿತಾ (ಭಾರತ) – ರೂ. 10 ಲಕ್ಷ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಸ್ಮೃತಿ ಮಂಧಾನ (ಭಾರತ) – ರೂ. 3.4 ಕೋಟಿ, ಸೋಫಿ ಡಿವೈನ್ (ನ್ಯೂಜಿಲೆಂಡ್‌) – ರೂ. 50 ಲಕ್ಷ, ಎಲೀಸ್ ಪೆರಿ (ಆಸ್ಟ್ರೇಲಿಯಾ) – ರೂ. 1.7 ಕೋಟಿ, ರೇಣುಕಾ ಸಿಂಗ್ (ಭಾರತ) – ರೂ. 1.5 ಕೋಟಿ, ರಿಚಾ ಘೋಷ್ (ಭಾರತ) – ರೂ. 1.9 ಕೋಟಿ, ಎರಿನ್ ಬರ್ನ್ಸ್ (ಆಸ್ಟ್ರೇಲಿಯಾ) – ರೂ. 30 ಲಕ್ಷ, ದಿಶಾ ಕಸತ್ (ಭಾರತ) – ರೂ. 10 ಲಕ್ಷ, ಇಂದ್ರಾಣಿ ರಾಯ್ (ಭಾರತ) – ರೂ. 10 ಲಕ್ಷ, ಶ್ರೇಯಾಂಕಾ ಪಾಟೀಲ್ (ಭಾರತ) – ರೂ. 10 ಲಕ್ಷ, ಕನಿಕಾ ಅಹುಜಾ (ಭಾರತ) – ರೂ. 35 ಲಕ್ಷ, ಆಶಾ ಶೋಬನಾ (ಭಾರತ) – ರೂ. 10 ಲಕ್ಷ, ಹೆದರ್ ನೈಟ್ (ಇಂಗ್ಲೆಂಡ್‌) – ರೂ. 40 ಲಕ್ಷ, ಡೇನ್ ವ್ಯಾನ್ ನೀಕರ್ಕ್ (ದ. ಆಫ್ರಿಕಾ) – ರೂ. 30 ಲಕ್ಷ, ಪ್ರೀತಿ ಬೋಸ್ (ಭಾರತ) – ರೂ. 30 ಲಕ್ಷ, ಪೂನಂ ಖೇಮ್ನಾರ್ (ಭಾರತ) – ರೂ. 10 ಲಕ್ಷ, ಕೋಮಲ್ ಜಂಜಾದ್ (ಭಾರತ) – ರೂ. 25 ಲಕ್ಷ, ಮೇಗನ್ ಶುಟ್ (ಆಸ್ಟ್ರೇಲಿಯಾ) – ರೂ. 40 ಲಕ್ಷ, ಸಹನಾ ಪವಾರ್ (ಭಾರತ) – ರೂ. 10 ಲಕ್ಷ.

ಯು.ಪಿ. ವಾರಿಯರ್ಸ್‌ : ಸೋಫಿ ಎಕ್ಲೇಸ್ಟೋನ್ (ಇಂಗ್ಲೆಂಡ್‌)- ರೂ. 1.8 ಕೋಟಿ, ದೀಪ್ತಿ ಶರ್ಮಾ (ಭಾರತ) – ರೂ. 2.6 ಕೋಟಿ, ತಹ್ಲಿಯಾ ಮೆಗ್ರಾತ್ (ಆಸ್ಟ್ರೇಲಿಯಾ) – ರೂ. 1.4 ಕೋಟಿ, ಶಬ್ನಿಮ್ ಇಸ್ಮಾಯಿಲ್ (ದ. ಆಫ್ರಿಕಾ) – ರೂ. 1 ಕೋಟಿ, ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ) – ರೂ. 70 ಲಕ್ಷ, ಅಂಜಲಿ ಸರ್ವಾಣಿ (ಭಾರತ) – ರೂ. 55 ಲಕ್ಷ, ರಾಜೇಶ್ವರಿ ಗಾಯಕ್ವಾಡ್ (ಭಾರತ) – ರೂ. 40 ಲಕ್ಷ, ಪಾರ್ಶವಿ ಚೋಪ್ರಾ (ಭಾರತ) – ರೂ. 10 ಲಕ್ಷ, ಶ್ವೇತಾ ಸೆಹ್ರಾವತ್ (ಭಾರತ) – ರೂ. 40 ಲಕ್ಷ, ಎಸ್. ಯಶಶ್ರೀ (ಭಾರತ) – ರೂ. 10 ಲಕ್ಷ, ಕಿರಣ್ ನವಗಿರೆ (ಭಾರತ) – ರೂ. 30 ಲಕ್ಷ, ಗ್ರೇಸ್ ಹ್ಯಾರಿಸ್ (ಆಸ್ಟ್ರೇಲಿಯಾ) – ರೂ. 75 ಲಕ್ಷ, ದೇವಿಕಾ ವೈದ್ಯ (ಭಾರತ) – ರೂ. 1.4 ಕೋಟಿ, ಲಾರೆನ್ ಬೆಲ್ (ಇಂಗ್ಲೆಂಡ್‌) – ರೂ. 30 ಲಕ್ಷ, ಲಕ್ಷ್ಮಿ ಯಾದವ್ (ಭಾರತ) – ರೂ. 10 ಲಕ್ಷ, ಸಿಮ್ರನ್ ಶೇಖ್ (ಭಾರತ) – ರೂ. 10 ಲಕ್ಷ.

ಗುಜರಾತ್‌ ಜಯಂಟ್ಸ್‌: ಆಶ್ಲೇ ಗಾರ್ಡ್ನರ್ (ಆಸ್ಟ್ರೇಲಿಯಾ) – ರೂ. 3.2 ಕೋಟಿ, ಬೆತ್ ಮೂನಿ (ಆಸ್ಟ್ರೇಲಿಯಾ) – ರೂ. 2 ಕೋಟಿ, ಸೋಫಿಯಾ ಡಂಕ್ಲಿ (ಇಂಗ್ಲೆಂಡ್‌) – ರೂ. 60 ಲಕ್ಷ, ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ) – ರೂ. 70 ಲಕ್ಷ, ಹರ್ಲೀನ್‌ ಡಿಯೋಲ್‌ (ಭಾರತ) – ರೂ. 40 ಲಕ್ಷ, ಡಿಯಾಂಡ್ರಾ ಡಾಟಿನ್ (ವಿಂಡೀಸ್‌) – ರೂ. 60 ಲಕ್ಷ, ಸ್ನೇಹ ರಾಣಾ (ಭಾರತ) – ರೂ. 75 ಲಕ್ಷ, ಸಬ್ಬಿನೇನಿ ಮೇಘನಾ (ಭಾರತ) – ರೂ. 40 ಲಕ್ಷ, ಜಾರ್ಜಿಯಾ ವೇರ್ಹ್ಯಾಮ್ (ಆಸ್ಟ್ರೇಲಿಯಾ) – ರೂ. 75 ಲಕ್ಷ, ಮಾನ್ಸಿ ಜೋಶಿ (ಭಾರತ) – ರೂ. 30 ಲಕ್ಷ, ದಯಾಳನ್ ಹೇಮಲತಾ (ಭಾರತ) – ರೂ. 30 ಲಕ್ಷ, ಮೋನಿಕಾ ಪಟೇಲ್ (ಭಾರತ) – ರೂ. 30 ಲಕ್ಷ, ತನುಜಾ ಕನ್ವರ್ (ಭಾರತ) – ರೂ. 50 ಲಕ್ಷ, ಸುಷ್ಮಾ ವರ್ಮಾ (ಭಾರತ) – ರೂ. 60 ಲಕ್ಷ, ಹರ್ಲಿ ಗಾಲಾ (ಭಾರತ) – ರೂ. 10 ಲಕ್ಷ, ಅಶ್ವನಿ ಕುಮಾರಿ (ಭಾರತ) – ರೂ. 35 ಲಕ್ಷ, ಪರುಣಿಕಾ ಸಿಸೋಡಿಯಾ (ಭಾರತ) – ರೂ. 10 ಲಕ್ಷ, ಶಬ್ನಮ್ ಶಕೀಲ್ (ಭಾರತ) – ರೂ. 10 ಲಕ್ಷ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...