alex Certify ಅಚ್ಚರಿಗೊಳಿಸುತ್ತೆ ಜಗತ್ತಿನ ಅತ್ಯಂತ ಚಿಕ್ಕ ಹಂದಿಗಳ ಗಾತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಜಗತ್ತಿನ ಅತ್ಯಂತ ಚಿಕ್ಕ ಹಂದಿಗಳ ಗಾತ್ರ…!

ಹಿಮಾಲಯದ ತಪ್ಪಲಿನ ಹುಲ್ಲುಗಾವಲಿನಲ್ಲಿ ಕಂಡುಬರುವ ಪಿಗ್ಮಿ ಹಾಗ್ ಹೆಸರಿನ ಹಂದಿಗಳು ಜಗತ್ತಿನಲ್ಲೇ ಅತ್ಯಂತ ಚಿಕ್ಕ ಗಾತ್ರದ ಹಂದಿಗಳಾಗಿವೆ.

1857ರಲ್ಲಿ ಮೊದಲ ಬಾರಿಗೆ ಈ ಜೀವಿಗಳನ್ನು ಪತ್ತೆ ಮಾಡಲಾಯಿತು. ನಂತರದ ದಿನಗಳಲ್ಲಿ ಈ ಹಂದಿಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿ ಅಳಿದೇ ಹೋಗಿವೆಯೇನೋ ಎಂದೇ ಭಾವಿಸಲಾಗಿತ್ತು. ಆದರೆ 1970ರಲ್ಲಿ ಈ ಜೀವಿಗಳು ಇನ್ನೂ ಇವೆ ಎಂದು ಪತ್ತೆ ಮಾಡಲಾದ ಬಳಿಕ 1990ರ ದಶಕದಿಂದ ಇವುಗಳ ಉಳಿವಿಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕಂದು ಹಾಗೂ ಕಪ್ಪು ಬಣ್ಣವಿರುವ ಪಿಗ್ಮಿಗಳು ಕೇವಲ 8-10 ಇಂಚು ಉದ್ದವಿರುವ ಈ ಹಂದಿಗಳು 22 ಪೌಂಡ್‌ಗಿಂತ ಹೆಚ್ಚು ತೂಕ ಇರುವುದಿಲ್ಲ.

ಅಸ್ಸಾಂನಲ್ಲಿ ಈ ಹಂದಿಗಳನ್ನು ಸಂರಕ್ಷಿಸಲೆಂದು ತಾಣವೊಂದನ್ನು ಮಾಡಿಕೊಂಡು, ಅವುಗಳಿಗೆ ಆರೈಕೆ ಮಾಡಿ ಸ್ವಾಭಾವಿಕ ಜಗತ್ತಿಗೆ ಬಿಡಲಾಗಿತ್ತು. ಇದಾದ ಬಳಿಕ ಮಾಡಲಾದ ಸಂರಕ್ಷಣಾ ಕಾರ್ಯದ ನೆರವಿನಿಂದ ಇವುಗಳ ಸಂಖ್ಯೆ 300-400ರಷ್ಟಾಗಿದೆ. ಅಸ್ಸಾಂನ ಮನಸ್ ಹಾಗೂ ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಹಂದಿಗಳು ಹೆಚ್ಚಾಗಿ ಕಂಡುಬರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...