alex Certify ಗನ್‌ ಹಿಡಿದವನು ಪಕ್ಕದಲ್ಲಿದ್ದರೂ ಚಿಕನ್‌ ತಿನ್ನೋದನ್ನ ಬಿಡಲಿಲ್ಲ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗನ್‌ ಹಿಡಿದವನು ಪಕ್ಕದಲ್ಲಿದ್ದರೂ ಚಿಕನ್‌ ತಿನ್ನೋದನ್ನ ಬಿಡಲಿಲ್ಲ ಭೂಪ…!

ನಾವು ಹೋದ ಅಂಗಡಿಯಲ್ಲಿ ಯಾರಾದರೂ ದರೋಡೆಕೋರರು ನುಗ್ಗಿದ್ದಾರೆ ಅಂದರೆ ಕೈ ಕಾಲೆಲ್ಲ ನಡುಗಿ ಬಿಡಬಹುದು. ಅವಕಾಶ ಸಿಕ್ಕರೆ ಸಾಕು ಅಲ್ಲಿಂದ ಕಾಲ್ಕಿತ್ತುಬಿಡ್ತೇವೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಪಕ್ಕದಲ್ಲೇ ಕಳ್ಳ ಪಿಸ್ತೂಲ್ ಹಿಡಿದು ನಿಂತಿದ್ದರೂ ಸಹ ಆರಾಮಾಗಿ ಚಿಕನ್​ ವಿಂಗ್​ ತಿಂದಿದ್ದಾನೆ.

ರೆಸ್ಟಾರೆಂಟ್​ ಒಂದು ಜನರಿಂದ ತುಂಬಿತ್ತು. ಇದೇ ವೇಳೆ ಹೆಲ್ಮೆಟ್​ ಧರಿಸಿ ನುಗ್ಗಿದ ಕಳ್ಳನೊಬ್ಬ ಗ್ರಾಹಕರಿಗೆ ಪಿಸ್ತೂಲ್​ ತೋರಿಸಿದ್ದಾನೆ. ಇದರಿಂದ ಭಯಗೊಂಡ ಗ್ರಾಹಕರು ತಮ್ಮ ಪರ್ಸ್​ ಹಾಗೂ ಮೊಬೈಲ್​ಗಳನ್ನ ಕಳ್ಳನಿಗೆ ನೀಡಿ ಒಬ್ಬೊಬ್ಬರಾಗಿಯೇ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ತಲೆ ಕೆಡಿಸಿಕೊಳ್ಳದ ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ಚಿಕನ್​ ತಿನ್ನುತ್ತಾ ಕೂತಿದ್ದ. ಕಳ್ಳನಿಗೆ ತನ್ನ ಮೊಬೈಲ್​ನ್ನೂ ಕೊಟ್ಟ ಈ ಗ್ರಾಹಕ ಮತ್ತೆ ಚಿಕನ್ ತಿನ್ನೋದನ್ನ ಮುಂದುವರಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ರೆಸ್ಟಾರೆಂಟ್​ನ ಸಿಸಿ ಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...