alex Certify ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ‘ಗುಡ್ ‌ಬೈ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ‘ಗುಡ್ ‌ಬೈ’

ಗುಡ್‌ ಬೈ ಚಿತ್ರದ ಶೂಟಿಂಗ್ ಶೆಡ್ಯೂಲ್ ಮುಗಿದಿದೆ. ಮತ್ತು ಸೆಟ್‌ನಿಂದ ಗ್ಲಿಂಪ್ಸ್ ನೀಡಿರುವುದು ಮತ್ಯಾರೂ ಅಲ್ಲ ಕನ್ನಡದ ಕುವರಿ ನಟಿ ರಶ್ಮಿಕಾ ಮಂದಣ್ಣ.

“ಗುಡ್ ಬೈ ನನ್ನ ಮಗು “ಗುಡ್ ಬೈ” ಗೆ ಗುಡ್‌ಬೈ ಹೇಳಲು ದ್ವೇಷಿಸುತ್ತೇನೆ ಎಂದು ಶೀರ್ಷಿಕೆಯೊಂದಿಗೆ ಅಪರೂಪದ ಫೋಟೋ ಶೇರ್ ಮಾಡಿದ್ದಾರೆ.

ಕೋವಿಡ್ ಅಲೆಗಳ ನಡುವೆ ನಾವು ಈ ಪ್ರಯಾಣ ಪ್ರಾರಂಭಿಸಿ 2 ವರ್ಷಗಳು ಕಳೆದಿವೆ ಎಂದು ಹೇಳಿಕೊಂಡಿರುವ ಅವರು ಸೀರಿಯಸ್ಸಾಗಿ ನಗುವುದಕ್ಕೆ ಸಿದ್ಧರಾಗಿ ಎಂದು ತಮ್ಮ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಸಹ ನಟರಾದ ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರಿಗೆ ಕೃತಜ್ಞತೆಯ ವಿಶೇಷ ಕೂಡ ಬರೆದಿದ್ದಾರೆ.

“ಅಮಿತಾಬ್ ಬಚ್ಚನ್ ಸರ್, ನಿಮ್ಮೊಂದಿಗೆ ಈ ಚಿತ್ರವನ್ನು ಮಾಡಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ತುಂಬಾ ಕೃತಜ್ಞಳಾಗಿರುತ್ತೇನೆ. ನೀವು ವಿಶ್ವದ ಅತ್ಯುತ್ತಮ ವ್ಯಕ್ತಿ. ” ಎಂದು ಅವರೊಂದಿಗಿನ ಫೋಟೋ ಕೂಡ ಶೇರ್ ಮಾಡಿದ್ದಾರೆ.

ನೀನಾ ಗುಪ್ತಾ ಕುರಿತಂತೆ, ನೀವು ಅತ್ಯಂತ ಮುದ್ದಾಗಿದ್ದೀರಿ. ನಾನು ನಿಮ್ಮನ್ನು ಮಿಸ್ ಮಾಡಿ ಕೊಳ್ಳುತ್ತೇನೆ ಎಂದು ಎರಡು ಸಾಲು ಬರೆದಿದ್ದು, ಚಿತ್ರದ ಪಾತ್ರಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ನಿರ್ದೇಶಕ ವಿಕಾಸ್ ಬಹ್ಲ್ ಅವರಿಗೆ ಸಹ ರಶ್ಮಿಕಾ ಧನ್ಯವಾದ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...