alex Certify ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ಸೆಪ್ಟೆಂಬರ್​ 2ನೇ ತಾರೀಖನ್ನು ವಿಶ್ವ ತೆಂಗಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗಲ್ಪಡುವ ಹಣ್ಣುಗಳಲ್ಲಿ ಇದೂ ಒಂದಾಗಿದೆ.

ಎಳೆನೀರು, ತೆಂಗಿನ ತುರಿ, ತೆಂಗಿನ ಎಣ್ಣೆ ಹೀಗೆ ತೆಂಗಿನ ಕಾಯಿಯನ್ನು ನಾನಾ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ.

ಈ ದಿನದಂದು ವಿಶ್ವಾದ್ಯಂತ ತೆಂಗಿನ ದಿನ ಎಂದೇ ಆಚರಿಸಲಾಗುತ್ತದೆ. ಈ ದಿನದಂದು ತೆಂಗಿನ ಕಾಯಿಯ ಪ್ರಯೋಜನಗಳ ಬಗ್ಗೆ ಅರಿಯೋದ್ರ ಜೊತೆಗೆ ಅವುಗಳನ್ನ ಬೆಳೆಯುವುದು ಹಾಗೂ ಸಂರಕ್ಷಿಸುವುದು ಹೇಗೆ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತೆಂಗಿನ ಕಾಯಿಯು ದೈನಂದಿನ ಜೀವನದ ಭಾಗವಾಗಿದೆ.

ಮೊಟ್ಟ ಮೊದಲ ವಿಶ್ವ ತೆಂಗಿನ ದಿನವನ್ನು 2009ರಲ್ಲಿ ಏಷ್ಯಾ ಪೆಸಿಫಿಕ್​​​ ಕೊಕೊನಟ್​ ಕಮ್ಯೂನಿಟಿ ಆಚರಿಸಿತು. ಇದಾದ ಬಳಿಕ ಈ ಆಚರಣೆಯು ಇಲ್ಲಿಯವರೆಗೆ ಮುಂದುವರಿಸಿದಿದೆ. ವಿಶ್ವಸಂಸ್ಥೆಯ ಸಹಭಾಗಿತ್ವದಲ್ಲಿ ಎಪಿಸಿಸಿ ತೆಂಗಿನ ಕಾಯಿಯ ಮಹತ್ವವನ್ನು ವಿಶ್ವಕ್ಕೆ ಸಾರಿದೆ.

ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿಯಿಂದ ಮಾಡಲ್ಪಟ್ಟ ತಿನಿಸುಗಳಿಗೆ ತುಂಬಾನೇ ಮಹತ್ವವಿದೆ. ತೆಂಗಿನಕಾಯಿ ಅಭಿವೃದ್ಧಿ ಮಂಡಳಿಯು ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಓಡಿಶಾ ಸೇರಿದಂತೆ ಹಲವಡೆ ತೆಂಗಿನ ಕಾಯಿಯ ಮಹತ್ವವನ್ನು ಸಾರುತ್ತಿದೆ.

ತೆಂಗಿನ ಕಾಯಿಯ ಬಗ್ಗೆ ನಿಮಗೆ ತಿಳಿದಿರದ ಇಂಟರೆಸ್ಟಿಂಗ್​ ವಿಷಯಗಳು :

1 ತೆಂಗಿನ ಕಾಯಿ ಮರವು ಪ್ರತಿ ವರ್ಷ ಸುಮಾರು 100 ತೆಂಗಿನಕಾಯಿಗಳನ್ನು ನೀಡುತ್ತದೆ.

ತೆಂಗಿನ ಕಾಯಿಗಳು ಬಲಿತಾಗಲು 1ವರ್ಷ ಸಮಯ ತೆಗೆದುಕೊಳ್ಳುತ್ತದೆ.

ಕೊಕೊನಟ್​ ಎಂಬ ಪದದಲ್ಲಿ ಇರುವ ಕೊಕೊ ಎಂಬ ಪದವನ್ನು ಪೋರ್ಚುಗೀಸ್​ ಭಾಷೆಯಿಂದ ಎರವಲು ಪಡೆಯಲಾಗಿದೆ.

ವಿಶ್ವದಲ್ಲಿ 90 ಪ್ರತಿಶತ ತೆಂಗಿನ ಕಾಯಿಯನ್ನು ಏಷ್ಯಾ ಖಂಡವೇ ಬೆಳೆಯುತ್ತದೆ.

ಇಂಡೋನೇಷಿಯಾ, ಫಿಲಿಪೈನ್ಸ್​, ಬ್ರೆಜಿಲ್​ ಹಾಗೂ ಶ್ರೀಲಂಕಾದೊಂದಿಗೆ ಭಾರತ ಕೂಡ ವಿಶ್ವದ ಅತೀ ದೊಡ್ಡ ತೆಂಗಿನಕಾಯಿ ರಫ್ತುದಾರ ರಾಷ್ಟ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...