alex Certify ಈ ಊರಿನ ಮಹಿಳೆಯರ ಸರಾಸರಿ ಆಯುಷ್ಯ 95 ವರ್ಷ…! ಇಲ್ಲಿದೆ ಇದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಊರಿನ ಮಹಿಳೆಯರ ಸರಾಸರಿ ಆಯುಷ್ಯ 95 ವರ್ಷ…! ಇಲ್ಲಿದೆ ಇದರ ಹಿಂದಿನ ಕಾರಣ

ಇಂಗ್ಲೆಂಡ್‌ನ ಥರ್ನ್‌‌ಹಾಮ್‌ ಮತ್ತು ಡೆಟ್ಲಿಂಗ್ ಎಂಬ ಊರು ಎರಡು ವಿಷಯಗಳಿಂದ ಖ್ಯಾತಿ ಪಡೆದಿದೆ. ಸುದೀರ್ಘಾಯುಷ್ಯ ಹಾಗೂ ಪುರುಷರಿಗಿಂತ ಹೆಚ್ಚಿನ ಆಯುಷ್ಯ ಬದುಕುವ ಮಹಿಳೆಯರು ಇಲ್ಲಿದ್ದಾರೆ..!

ದುರ್ಗಾ ಮಾತೆಗೆ ಈ ಹೂವುಗಳನ್ನು ಅರ್ಪಿಸಲೇಬೇಡಿ….!

ಈ ಊರಿನಲ್ಲಿ ಮಹಿಳೆಯರ ಸರಾಸರಿ ಆಯುಷ್ಯವು 95 ವರ್ಷಗಳು. ಬ್ರಿಟನ್‌ನಲ್ಲಿ ಜನರ ಸರಾಸರಿ ಆಯುಷ್ಯ 83 ವರ್ಷಗಳಿದ್ದು, ಈ ಊರಿನಲ್ಲಿ ಇದಕ್ಕಿಂತ 12 ವರ್ಷಗಳು ಹೆಚ್ಚಿದೆ. ಈ ಊರಿನಲ್ಲಿ ಪುರುಷರ ಸರಾಸರಿ ಆಯುಷ್ಯ 86 ವರ್ಷಗಳಿದ್ದು, ಮಹಿಳೆಯರಿಗಿಂತ 9 ವರ್ಷಗಳು ಕಡಿಮೆ ಇದೆ.

ಹೆಚ್ಚಾಗ್ತಿದೆ ಲಿಂಗ ಪರಿವರ್ತನೆ..! ಗಂಡು ಹೆಣ್ಣಾಗ್ತಿರಲು ಕಾರಣವೇನು…..?

ಊರಿನಲ್ಲಿ ಧೂಮಪಾನ ನಿಷೇಧಿಸಲಾಗಿದ್ದು, ಗ್ರಾಮಸ್ಥರು ಆರೋಗ್ಯದ ಬಗ್ಗೆ ಬಹಳ ಕಳಕಳಿ ಹೊಂದಿರುವ ಕಾರಣ ಕಳೆದ 7 ವರ್ಷಗಳಿಂದ ಈ ನಿಯಮ ತರಲಾಗಿದೆ.

ನಾರ್ತ್‌ ಡೌನ್ಸ್‌ ಬಳಿ ಇರುವ ಡೆಟ್ಲಿಂಗ್‌ನಲ್ಲಿ 800ರಷ್ಟು ಜನರು ಇದ್ದು, ಊರಿನ ಒಂದಷ್ಟು ಜನರು ಬ್ರಿಟನ್‌ನಲ್ಲೇ ಅತ್ಯಂತ ಹಿರಿಯ ನಾಗರಿಕರ ಪಟ್ಟಿಯಲ್ಲಿದ್ದಾರೆ.

ಪಥ್ಯದ ಬಗ್ಗೆ ಬಹಳ ಕಾಳಜಿ ಇರುವ ಈ ಊರಿನ ಮಂದಿಯ ಆರೈಕೆ ಮಾಡಲು ಎಂಟು ಮಂದಿ ವೈದ್ಯರಿದ್ದು, ಸರಾಸರಿ 100 ಮಂದಿಗೆ ಒಬ್ಬರಂತೆ ವೈದ್ಯರಿದ್ದಾರೆ. ವೈದ್ಯಕೀಯ ಸೇವೆಗಳ ಲಭ್ಯತೆಯ ಕಾರಣ ಈ ಊರಿನಲ್ಲಿ ಸರಾಸರಿ ಆಯುಷ್ಯದ ನಿರೀಕ್ಷೆ ಹೆಚ್ಚಿದೆ. ಶುದ್ಧ ನೀರಿನ ಅತ್ಯುತ್ತಮ ಮೂಲವಾಗಿ ಈ ಊರಿನಲ್ಲಿ ಸ್ವಾಭಾವಿಕ ಕೊಳವೂ ಇದೆ.

ಪ್ರತಿಯೊಬ್ಬ ಭಾರತೀಯರಿಗೆ ಸಿಗಲಿದೆ ಆರೋಗ್ಯ ವಿಮೆ: ಸರ್ಕಾರ ರೂಪಿಸಿದೆ ಹೊಸ ಯೋಜನೆ

ಇದೇ ವರ್ಷದ ಏಪ್ರಿಲ್‌ನಲ್ಲಿ ಊರಿನವರೇ ಆದ ಇರೇನೇ ನಾಬ್ಸ್‌ ತಮ್ಮ 102ನೇ ಹುಟ್ಟುಹಬ್ಬ ಆಚರಿಸಿದ್ದಾರೆ. “ಸದಾ ಕ್ರಿಯಾಶೀಲಳಾಗಿರುವ ಕಾರಣ ನಾನು ಇಷ್ಟು ದೀರ್ಘವಾದ ಬದುಕು ಸವೆಸಿದ್ದೇನೆ. ಇಲ್ಲಿನ ಜೀವನಾಯುಷ್ಯ ಉತ್ತಮವಾಗಿದೆ. ಗುಡ್ಡ ಪ್ರದೇಶದ ನೀರಿನ ಗುಣಮಟ್ಟ ಹಾಗೂ ಶುದ್ಧ ಗಾಳಿ ಇದಕ್ಕೆ ಪ್ರಮುಖ ಕಾರಣವಾಗಿದೆ” ಎಂದು ಹೇಳುತ್ತಾರೆ ನಾಬ್ಸ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...