alex Certify ‌ʼಬಾಡಿ ಶೇಮಿಂಗ್‌ʼ ಮಾಡಿದ ವ್ಯಕ್ತಿಗೆ ಯುವತಿಯಿಂದ ಸಖತ್‌ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಬಾಡಿ ಶೇಮಿಂಗ್‌ʼ ಮಾಡಿದ ವ್ಯಕ್ತಿಗೆ ಯುವತಿಯಿಂದ ಸಖತ್‌ ಟಾಂಗ್

ಬಾಡಿ ಶೇಮಿಂಗ್​ ಮಾಡೋದು ತಪ್ಪು ಎಂದು ತಿಳಿದಿದ್ದರೂ ಸಹ ಅನೇಕರು ಈ ದುರಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಯಾರೇ ದಪ್ಪಗಿರಲಿ, ತೆಳ್ಳಗಿರಲಿ, ಕಪ್ಪಿರಲಿ ಹೀಗೆ ದೇಹದ ಯಾವುದೋ ಒಂದು ನ್ಯೂನ್ಯತೆಯನ್ನ ಹಿಡಿದು ಅದನ್ನೇ ಆಡಿಕೊಳ್ತಾರೆ . ಬಾಡಿ ಶೇಮಿಂಗ್​ಗೆ ಒಳಗಾದ ಅನೇಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.‌

ಆದರೆ ತನಗೆ ಬಾಡಿ ಶೇಮಿಂಗ್​ ಮಾಡಿದ ವ್ಯಕ್ತಿಗೆ ಯುವತಿಯೊಬ್ಬರು ಕೌಂಟರ್​ ನೀಡಿದ್ದು ಈ ವಿಚಾರವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಈ ಟ್ವೀಟ್​ ನೋಡಿದ ನೆಟ್ಟಿಗರು ಮಹಿಳೆಯ ಆತ್ಮಸ್ಥೈರ್ಯಕ್ಕೆ ಶಹಬ್ಬಾಸ್​ ಎಂದಿದ್ದಾರೆ .

ಜೆಮ್ನಿಕ್ವಾ ಎಂಬಾಕೆ ಟ್ವಿಟರ್​ನಲ್ಲಿ ಈ ವಿಚಾರವನ್ನ ಜೂನ್​ 13ರಂದು ಶೇರ್​ ಮಾಡಿದ್ದಾರೆ. ನಾನು ಮನೆಯ ಒಳಕ್ಕೆ ನಡೆದುಕೊಂಡು ಹೋಗುತ್ತಿದ್ದೆ. ಆಗ ನನ್ನ ತಾಯಿಯ ಸ್ನೇಹಿತರೊಬ್ಬರು ನನ್ನ ತೂಕ ಹೆಚ್ಚಾಗಿದೆ ಎಂದು ಹೇಳಿದ್ರು. ನಾನು ಕೂಡಲೇ ಅರೆ..! ನಾನು ನಿಮ್ಮ ಬಗ್ಗೆ ಇದನ್ನೇ ಯೋಚಿಸುತ್ತಿದ್ದೆ ಎಂದು ಹೇಳಿದೆ. ನನ್ನ ಈ ಉತ್ತರ ಕೇಳಿದ ನನ್ನ ತಂದೆ ಬಿದ್ದು ಬಿದ್ದು ನಗ್ತಿದ್ರೆ ನನ್ನ ತಾಯಿ ಶಾಕ್​ಗೊಳಗಾದ್ರು ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 2 ಮಿಲಿಯನ್​ಗೂ ಅಧಿಕ ಲೈಕ್ಸ್ ಹಾಗೂ 21 ಸಾವಿರಕ್ಕೂ ಅಧಿಕ ರಿಟ್ವೀಟ್​ಗಳನ್ನ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಅನೇಕರು ಮುಂದಿನ ದಿನಗಳಲ್ಲಿ ನಮಗೆ ಈ ರೀತಿ ಬಾಡಿಶೇಮಿಂಗ್​ ಮಾಡಿದ್ರೆ ನಾವು ಕೂಡ ಇದೇ ಉತ್ತರವನ್ನ ನೀಡುತ್ತೇವೆ ಎಂದು ಹೇಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...