alex Certify Video | ಮೆಟ್ರೋ ಕೋಚ್​ನಲ್ಲಿ ಯುವತಿ ಸಾಹಸ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಮೆಟ್ರೋ ಕೋಚ್​ನಲ್ಲಿ ಯುವತಿ ಸಾಹಸ ಪ್ರದರ್ಶನ

ಮೆಟ್ರೋದಲ್ಲಿ ರೀಲ್ಸ್​ಗಳನ್ನು ಮಾಡುವ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗ್ತಿದೆ. ಇದೇ ರೀತಿ ದೆಹಲಿ ಮೆಟ್ರೋದಲ್ಲಿ ಸಾಕಷ್ಟು ಡ್ಯಾನ್ಸ್​ ವಿಡಿಯೋಗಳು ವೈರಲ್​ ಆಗ್ತಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನೂ ಕೆಲವರು ಈ ವಿಡಿಯೋವನ್ನು ಎಂಜಾಯ್​ ಮಾಡಿದ್ದಾರೆ. ಚಲಿಸುತ್ತಿರುವ ಮೆಟ್ರೋದ ಕೋಚ್​ನಲ್ಲಿ ಕ್ಯಾಲಿಸ್ಟೆನಿಕ್ಸ್​ ಪ್ರದರ್ಶನ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಜಗಜೌತ್​ ಕೌರ್ ಎಂಬ​​ ಸೋಶಿಯಲ್​ ಮೀಡಿಯಾ ಬಳಕೆದಾರರು ಮೆಟ್ರೋ ಕೋಚ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾರೆ. ಕೌರ್​​​​ ಮೆಟ್ರೋ ಒಳಗೆ ಬ್ಯಾಕ್​ಫ್ಲಿಪ್​ ಮಾಡಿದ್ದು ಇದಕ್ಕಾಗಿ ಮೆಟ್ರೋದ ಹ್ಯಾಂಡ್​ರೈಲ್​ ಬಳಕೆ ಮಾಡಿದ್ದಾರೆ. ಅಲ್ಲೇ ಇದ್ದ ಸಹ ಪ್ರಯಾಣಿಕರು ಯುವತಿಯ ಸಾಹಸವನ್ನು ನೋಡುತ್ತಾ ಕುಳಿತಿದ್ದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ .

ಇನ್​ಸ್ಟಾಗ್ರಾಂನಲ್ಲಿ ಕೌರ್​​​ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು ಈ ವಿಡಿಯೋದ ಕಾಮೆಂಟ್​ ವಿಭಾಗದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಮ್ಮ ಸಾಹಸ ಪ್ರದರ್ಶನ ಚೆನ್ನಾಗಿತ್ತು ಆದರೆ ಸ್ಥಳದ ಆಯ್ಕೆ ಸರಿಯಿಲ್ಲ. ಸಾರ್ವಜನಿಕ ಸ್ವತ್ತುಗಳನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಇನ್ನೂ ಕೆಲವರು ದೆಹಲಿ ಮೆಟ್ರೋಗೆ ನಿಮಗೆ ಸ್ವಾಗತ ಅಂತಾ ಫನ್ನಿಯಾಗಿ ಕಮೆಂಟ್​ ಮಾಡಿದ್ದಾರೆ.

https://www.youtube.com/shorts/hLi74niSN2Q

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...