alex Certify ಪುಟ್ಟ ಮಗುವೊಂದಿಗಿದ್ದರೂ ಸೀಟ್‌ ಬಿಟ್ಟುಕೊಡದ ಮೆಟ್ರೋ ಪ್ರಯಾಣಿಕರು…! ಕರುಣೆಯೇ ಇಲ್ಲದ ಜನ ಅಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗುವೊಂದಿಗಿದ್ದರೂ ಸೀಟ್‌ ಬಿಟ್ಟುಕೊಡದ ಮೆಟ್ರೋ ಪ್ರಯಾಣಿಕರು…! ಕರುಣೆಯೇ ಇಲ್ಲದ ಜನ ಅಂದ ನೆಟ್ಟಿಗರು

ಗರ್ಭಿಣಿ ಅಥವಾ ಮಗು ಹಿಡಿದುಕೊಂಡ ಮಹಿಳೆ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವಾಗ ಕೆಲವರು ಆಸನವನ್ನು ಬಿಟ್ಟು ಕೊಡುವುದಿಲ್ಲ. ಇಂಥ ಘಟನೆಗಳು ಆಗಾಗ ಸಂಭವಿಸುತ್ತಿರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೇ ಘಟನೆಯ ವಿಡಿಯೋ ವೈರಲ್ ಆಗಿದೆ.

ಮೆಟ್ರೋದಲ್ಲಿ ಮಹಿಳೆಯೊಬ್ಬರು ಪುಟ್ಟ ಕಂದನನ್ನು ಹಿಡಿದುಕೊಂಡು ಕೆಳಗೆ ನೆಲದ ಮೇಲೆ ಕುಳಿತಿದ್ದರೆ, ಇತರೆ ಪ್ರಯಾಣಿಕರು ಆರಾಮವಾಗಿ ಆಸನಗಳಲ್ಲಿ ಕುಳಿತಿದ್ದಾರೆ. ಯಾರೊಬ್ಬರೂ ಆಕೆಗೆ ತಮ್ಮ ಆಸನವನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಆಕೆ ಅನಿವಾರ್ಯವಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು.

ಈ ಹೃದಯ ವಿದ್ರಾವಕ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನ ಮಗುವಿನೊಂದಿಗೆ ಮೆಟ್ರೋ ರೈಲಿನ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಅಲ್ಲಿ ಹಲವಾರು ಮಹಿಳೆಯರು ಆಸನಗಳನ್ನು ಆಕ್ರಮಿಸಿಕೊಂಡಿದ್ದರು. ಆದರೆ ಆಸನವನ್ನು ಬಿಟ್ಟುಕೊಡಲು ಯಾರೊಬ್ಬರು ಸಿದ್ಧರಿಲ್ಲ.

ಈ ವಿಡಿಯೋ ವೈರಲ್ ಆಗಿದ್ದು, ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಕಾಮೆಂಟ್‌ ವಿಭಾಗದಲ್ಲಿ ಇದು ಹಳೆಯ ವಿಡಿಯೋ ಎಂದು ಬಳಕೆದಾರರು ಹೇಳಿದ್ದಾರೆ. ಮಹಿಳೆಗೆ ಅನೇಕರು ಆಸನವನ್ನು ನೀಡಲು ಮುಂದಾಗಿದ್ದರು. ಆದರೆ ಮಹಿಳೆಯೇ ಆಸನವನ್ನು ನಿರಾಕರಿಸಿದ್ದರು. ಏಕೆಂದರೆ ತನ್ನ ತೊಡೆಯ ಮೇಲೆ ಮಗುವನ್ನು ಆರಾಮದಾಯಕವಾಗಿ ಮಲಗಿಸಲು ನೆಲದ ಮೇಲೆ ಕುಳಿತುಕೊಳ್ಳಲು ಮಹಿಳೆ ಇಷ್ಟಪಟ್ಟಿದ್ದಾಗಿ ಕೆಲವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...