alex Certify ಜಿಮ್​ ನಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ಮಹಿಳೆ ನೆರವಿಗೆ ಬಂತು ಸ್ಮಾರ್ಟ್​ ವಾಚ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್​ ನಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ಮಹಿಳೆ ನೆರವಿಗೆ ಬಂತು ಸ್ಮಾರ್ಟ್​ ವಾಚ್​…!

ಉತ್ಸಾಹದಲ್ಲಿ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಮಹಿಳೆ, ಅಲ್ಲಿದ್ದ ಉಪಕರಣದಲ್ಲಿ ತಲೆ ಕೆಳಗಾಗಿದ್ದ ಸಂದರ್ಭದಲ್ಲಿ ಸಿಲುಕಿಕೊಂಡು ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಪೊಲೀಸರ ನೆರವು ಕೋರಿದ ಪ್ರಸಂಗವೊಂದು ನಡೆದಿದೆ.

ಓಹಿಯೋ ಮೂಲದ ಕ್ರಿಸ್ಟಿನ್​ ಫಾಲ್ಡ್​ ಅವರು ಜಿಮ್​ ಉಪಕರಣಗಳಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ನಂತರ 911ಗೆ ಕರೆ ಮಾಡಿದರು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿರುವ ವಿಡಿಯೊ ಕ್ರಿಸ್ಟಿನ್​ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ತಲೆಕೆಳಗಾಗಿ ನೇತಾಡುತ್ತಿರುವುದನ್ನು ತೋರಿಸುತ್ತದೆ. ಕ್ರಿಸ್ಟಿನ್​ ಸಮಸ್ಯೆಯನ್ನು ಅರಿತುಕೊಂಡಾಗ, ಅವರು ತಕ್ಷಣದ ಸಹಾಯಕ್ಕಾಗಿ 911 ಗೆ ಕರೆ ಮಾಡಬೇಕಾಯಿತು.

ಕ್ರಿಸ್ಟಿನ್​ ಸಹಾಯಕ್ಕಾಗಿ ಜೇಸನ್​ ಎಂಬ ಜಿಮ್​ನಲ್ಲಿದ್ದ ವ್ಯಕ್ತಿಗೆ ಕರೆ ಮಾಡುತ್ತಾರೆ. ಆದರೆ ಜೋರಾಗಿ ಹಾಕಲಾಗಿದ್ದ ಮ್ಯೂಸಿಕ್​ನಿಂದ ಜೇಸನ್​ಗೆ ಕೂಗು ಕೇಳಿರಲಿಲ್ಲ. ಆಕೆಗೆ ಕೇವಲ ಒಂದು ಆಯ್ಕೆ ಉಳಿದಿತ್ತು, ಹೀಗಾಗಿ 911ಕ್ಕೆ ಸ್ಮಾರ್ಟ್​ ವಾಚ್​ ಮೂಲಕ ಕರೆ ಮಾಡಿದ್ದಾರೆ.

ನಾನು ಜಿಮ್​ನಲ್ಲಿ ಸಿಲುಕಿಕೊಂಡಿದ್ದೇನೆ, ಯಾರ ಗಮನವನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ, ನಾನು ತಲೆಕೆಳಗಾಗಿ ಸಿಲುಕಿಕೊಂಡಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದು, ಕ್ರಿಸ್ಟಿನ್​, 911 ಗೆ ಕರೆ ಮಾಡಿದ ಕೆಲವು ನಿಮಿಷಗಳ ನಂತರ ಅಧಿಕಾರಿಯೊಬ್ಬರು ಆಗಮಿಸಿ ಸಹಾಯ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...