alex Certify ಕಲ್ಲಂಗಡಿ ಹಣ್ಣು ಬಳಸಿ ವಿಶ್ವ ದಾಖಲೆ ಮಾಡಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲಂಗಡಿ ಹಣ್ಣು ಬಳಸಿ ವಿಶ್ವ ದಾಖಲೆ ಮಾಡಿದ ಮಹಿಳೆ…!

ಅಮೆರಿಕದ ಮಹಿಳಾ ಬಾಡಿ ಬಿಲ್ಡರ್​​ ಒಬ್ಬರು ಕೇವಲ 7.5 ಸೆಕೆಂಡ್​ಗಳಲ್ಲಿ ಮೂರು ಕಲ್ಲಂಗಡಿ ಹಣ್ಣುಗಳನ್ನ ತಮ್ಮ ತೊಡೆಗಳ ಸಹಾಯದಿಂದ ಒಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆ ಉಕ್ರೇನ್​​ನ ಬಾಡಿ ಬಿಲ್ಡರ್​ ಲೈಶಾಚುಕ್​ ಎಂಬವರು 2014ರಲ್ಲಿ ಈ ವಿಶ್ವ ದಾಖಲೆಯನ್ನ ನಿರ್ಮಿಸಿದ್ದರು. ಆದರೆ ಅವರು ದಾಖಲೆ ಪೂರೈಸಲು ತೆಗೆದುಕೊಂಡ ಸಮಯಕ್ಕಿಂತ ಅರ್ಧ ಸಮಯ ಕಡಿಮೆ ತೆಗೆದಕೊಂಡ ಈಕೆ ಹಳೆಯ ದಾಖಲೆಯನ್ನ ಮುರಿದಿದ್ದಾರೆ.

ಉಕ್ರೇನ್​ ಬಾಡಿ ಬಿಲ್ಡರ್​ 14.65 ಸೆಕೆಂಡ್​ ತೆಗೆದುಕೊಂಡಿದ್ರೆ ಅಮೆರಿಕದ ಬಾಡಿ ಬಿಲ್ಡರ್​​ ಕೇವಲ 7.5 ಸೆಕೆಂಡ್​ ಸಮಯ ತೆಗೆದುಕೊಂಡಿದ್ದಾರೆ.

ಈ ವಿಭಾಗದಲ್ಲಿ ಪುರುಷರು ನಿರ್ಮಿಸಿರುವ ದಾಖಲೆಯನ್ನೂ ಈಕೆ ಮುರಿದಿದ್ದಾರೆ. ಇರಾನ್​ನ ಅಥ್ಲೀಟ್​ ರೋಶೋಲ್ಲಾ ಎಂಬವರು ಕಲ್ಲಂಗಡಿ ಹಣ್ಣುಗಳನ್ನ ಈ ರೀತಿ ಹೋಳು ಮಾಡಲು 10.88 ಸೆಕೆಂಡ್​ಗಳ ಸಮಯಾವಕಾಶ ತೆಗೆದುಕೊಂಡಿದ್ದರು.

ಈ ವಿಶ್ವ ದಾಖಲೆಯನ್ನ ನಿರ್ಮಿಸಲು ಸತತ 8 ವಾರಗಳಿಂದ ಒಸ್ಲೋನ್​ ಕಲ್ಲಂಗಡಿ ಹಣ್ಣುಗಳನ್ನ ಹೋಳು ಮಾಡುವ ತರಬೇತಿ ಪಡೆದಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...