alex Certify ಬೆಚ್ಚಿಬೀಳಿಸುವಂತಿದೆ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಪ್ಲಾನ್

ಯುವತಿಯೊಬ್ಬಳು ಕಾರು ಬಾಡಿಗೆಗೆ ಪಡೆದುಕೊಂಡು ರಸ್ತೆಯಲ್ಲಿ ಯದ್ವಾತದ್ವಾ ಚಲಾಯಿಸಿ ಮಾಜಿ ಬಾಯ್ ಫ್ರೆಂಡ್ ಮೇಲೆ ಸೇಡು ತೀರಿಸಿಕೊಂಡ ಅಚ್ಚರಿಯ ಘಟನೆ ಪೂರ್ವ ಚೀನಾದ ಶಾಕ್ಸಿಂಗ್ ನಲ್ಲಿ ನಡೆದಿದೆ.

ಕಳೆದ ಎರಡು ದಿನಗಳಲ್ಲಿ ಯುವತಿಯು 50 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಳು. ಅಲ್ಲದೆ 49 ಬಾರಿ ಕೆಂಪು ದೀಪ ಉರಿಸಿದ್ದಲ್ಲದೆ, ಅತಿ ವೇಗವಾಗಿ ಕಾರು ಚಲಾಯಿಸಿದ್ದಾಳೆ. ಈ ಕುರಿತು ತನಿಖೆ ನಡೆಸಿದ ಟ್ರಾಫಿಕ್ ಪೊಲೀಸರು ಯುವತಿ ಹಾಗೂ ಆಕೆಗೆ ಸಹಾಯ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಯುವಕನ ಮೂತ್ರಕೋಶದಲ್ಲಿತ್ತು ತೆಂಗಿನಕಾಯಿ ಗಾತ್ರದ ಕಲ್ಲು…!

ಚೆನ್ ಎಂಬಾತ ಕಿಯಾನ್ ಎಂಬವರಿಂದ ಯುವತಿಗಾಗಿ ಬಾಡಿಗೆಗೆ ಕಾರು ಪಡೆದುಕೊಂಡಿದ್ದ. ತನಗೆ ಗೆಳೆಯ ಕಿಯಾನ್ ಪ್ರೀತಿಯಲ್ಲಿ ಮೋಸ ಮಾಡಿದ್ದರಿಂದ ಕೋಪಗೊಂಡಿದ್ದ ಯುವತಿ ಈ ಉಪಾಯ ಹೂಡಿದ್ದಳು. ಮಾಜಿ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಕಾರನ್ನೇ ಬಾಡಿಗೆಗೆ ಪಡೆದು ಸಂಚಾರಿ ನಿಯಮ ಉಲ್ಲಂಘಿಸಿದ್ದು. ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಇತ್ತೀಚೆಗಷ್ಟೇ ತನಗೆ ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ಬೈಕ್‍ಗೆ ಬೆಂಕಿ ಹಚ್ಚಿದ್ದ ಘಟನೆ ಥೈಲ್ಯಾಂಡ್ ನ ಬ್ಯಾಂಕಾಕ್‍ನಲ್ಲಿ ವರದಿಯಾಗಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...