alex Certify ಸುಖ ನಿದ್ರೆಗಾಗಿ ಮಗುವಿನ ಪ್ರಾಣ ಪಣಕ್ಕಿಟ್ಟ ತಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ ನಿದ್ರೆಗಾಗಿ ಮಗುವಿನ ಪ್ರಾಣ ಪಣಕ್ಕಿಟ್ಟ ತಾಯಿ..!

ಮಕ್ಕಳ ಆರೋಗ್ಯ ಸ್ವಲ್ಪ ಏರುಪೇರಾದ್ರೂ ತಾಯಿ ನಿದ್ರೆ ಮಾಡುವುದಿಲ್ಲ. ಆದ್ರೆ ತಾನು ನಿದ್ರೆ ಮಾಡಬೇಕೆಂಬ ಕಾರಣಕ್ಕೆ ತಾಯಿಯೊಬ್ಬಳು ಮಗುವಿನ ಪ್ರಾಣವನ್ನು ಪಣಕ್ಕಿಟ್ಟಿದ್ದಾಳೆ. ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

16 ವಾರಗಳ ಮಗು ಸರಿಯಾಗಿ ನಿದ್ರೆ ಮಾಡ್ತಿರಲಿಲ್ಲ. ಅದ್ರಿಂದಾಗಿ ತಾಯಿಗೆ ನಿದ್ರೆ ಬರ್ತಿರಲಿಲ್ಲ. ಮಗು ಆರೋಗ್ಯ ಮೊದಲೇ ಸರಿಯಿಲ್ಲದ ಕಾರಣ ಕೊಳವೆ ಮೂಲಕ ಆಹಾರ ಹಾಕಲಾಗ್ತಿತ್ತು. ಮಗು ನಿದ್ರೆ ಮಾಡಿದ್ರೆ ನಾನು ಸರಿಯಾಗಿ ನಿದ್ರೆ ಮಾಡಬಹುದೆಂಬ ಕಾರಣಕ್ಕೆ ಮಗುವಿನ ಆಹಾರದಲ್ಲಿ ಬ್ಲೀಚ್ ಹಾಕಿದ್ದಾಳೆ.

ನೇರ ಪ್ರಸಾರದಲ್ಲೇ ಕೀಟನಾಶಕ ಸೇವನೆ ಮಾಡಿದ ʼಸೆಲೆಬ್ರಿಟಿʼ…! ಲೈವ್‌ ನೋಡಿ ಅಭಿಮಾನಿಗಳಿಗೆ ಶಾಕ್

ಆಹಾರ ಸೇವನೆ ಮಾಡ್ತಿದ್ದಂತೆ ಮಗು ಆರೋಗ್ಯ ಹದಗೆಟ್ಟಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಮಗು ಬದುಕುಳಿದಿದೆ. ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಯಿ ತಪ್ಪೊಪ್ಪಿಕೊಂಡಿದ್ದಾಳೆ. ಮಗುವನ್ನು ಅಜ್ಜಿ ವಶಕ್ಕೆ ನೀಡಲಾಗಿದೆ.

ಆರೋಪಿ ತಾಯಿಯ ದೊಡ್ಡ ಮಗಳು ಈ ವಿಷ್ಯವನ್ನು ಪೊಲೀಸ್ ಮುಂದೆ ಹೇಳಿದ್ದಾಳೆ. ಮಗುವಿಗೆ ಬ್ಲೀಚ್ ಹಾಕಿದ್ದು, ಅದು ವಾಂತಿ ಮಾಡಲು ಶುರು ಮಾಡಿತ್ತೆಂದು ಆಕೆ ಹೇಳಿದ್ದಳು. ಮಗುವನ್ನು 17 ವಾರಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ವೈದ್ಯರಿಗೆ ತಾಯಿ ಸುಳ್ಳು ಮಾಹಿತಿ ನೀಡಿದ್ದಳು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...