alex Certify ಸಾರ್ವಜನಿಕ ಶೌಚಾಲಯ ಬಳಸಲು ಹೋಗಿ ಪೇಚಿಗೆ ಸಿಲುಕಿದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಶೌಚಾಲಯ ಬಳಸಲು ಹೋಗಿ ಪೇಚಿಗೆ ಸಿಲುಕಿದ ಯುವತಿ..!

ಯಾವುದೇ ಎಲೆಕ್ಟ್ರಿಕ್​ ವಸ್ತುಗಳನ್ನ ಹಾಗೂ ಮಷಿನ್​ಗಳನ್ನ ಸುಖಾ ಸುಮ್ಮನೇ ಮುಟ್ಟಬಾರದು ಎಂದು ಹೇಳ್ತಾರೆ. ಇವುಗಳಿಂದ ಜೀವಕ್ಕೆ ಅಪಾಯ ಉಂಟಾಗೋ ಸಾಧ್ಯತೆ ಇರೋದ್ರಿಂದ ಈ ಮಾತನ್ನ ಪಾಲನೆ ಮಾಡೋದು ಕೂಡ ಒಳ್ಳೆಯದೇ. ಆದರೆ ಶೌಚಾಲಯಗಳ ವಿಚಾರದಲ್ಲಿ ಈ ಮಾತು ಅನ್ವಯವಾಗೋದಿಲ್ಲ.

ಆದರೆ ಸಾರ್ವಜನಿಕ ಶೌಚಾಲಯಗಳನ್ನ ಬಳಕೆ ಮಾಡೋವಾಗ ಕೊಂಚ ಎಚ್ಚರ ಅಗತ್ಯ. ಸಾರ್ವಜನಿಕ ಶೌಚಾಲಯಗಳನ್ನ ಬಳಕೆ ಮಾಡೋವಾಗ ಅಲ್ಲಿ ಫ್ಲಶ್​ ಮಾಡೋದು ಹೇಗೆ ಎಂಬ ಗೊಂದಲ ಕಾಡೋದು ಸಹಜ. ಒಂದೊಂದು ಕಡೆ ಒಂದೊಂದು ರೀತಿಯ ಸೌಲಭ್ಯ ಇರೋದ್ರಿಂದ ಇದು ಕೊಂಚ ತ್ರಾಸದಾಯಕ ಎನಿಸಬಹುದು.

ಬ್ರಿಟನ್​ನ ಯುವತಿಯೊಬ್ಬಳು ಮಾತ್ರ ಫ್ಲಶ್​ ಬಳಕೆ ಮಾಡೋವಾಗ ಗೊಂದಲಕ್ಕೆ ಒಳಗಾಗಿದ್ದು ಹಾಗಿರಲಿ. ಈಕೆಯ ಕೈಯೇ ಫ್ಲಶ್​ ಬಟನ್​ ಮಧ್ಯೆ ಸಿಲುಕಿದ್ದು ಪಡಬಾರದ ಪಾಡನ್ನ ಪಟ್ಟಿದ್ದಾಳೆ.

ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ ಯುವತಿ ಫ್ಲಶ್​ ಬಟನ್​ನ್ನು ಒತ್ತಲು ಹೋಗಿದ್ದಾಳೆ. ಈಕೆ ಮೇಲೆ ನೇತುಹಾಕಿದ್ದ ಬೋರ್ಡ್​ನ ಸೂಚನೆಯಂತೆ ಫ್ಲಶ್​ ಬಟನ್​ ಬಳಕೆ ಮಾಡಿದ್ದರೂ ಸಹ ಹೇಗೋ ಆಕೆಯ ಕೈ ಫ್ಲಶ್​ ಬಟನ್​ನ ಒಳಗೆ ಸಿಕ್ಕಿಹಾಕಿಕೊಂಡಿದೆ. ಇದಾದ ಬಳಿಕ ಅಲ್ಲಿನ ಸಿಬ್ಬಂದಿ ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಯುವತಿಯ ಸ್ನೇಹಿತ ಸಂಪೂರ್ಣ ದೃಶ್ಯಾವಳಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...