alex Certify ಕಾರ್ಪೆಟ್ ಅಡಿಯಲ್ಲಿ ಸೇಫ್ಟಿ ಲಾಕರ್; 20 ವರ್ಷಗಳಿಂದ ನೆಲದಡಿ ಅಡಗಿತ್ತು ರಹಸ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಪೆಟ್ ಅಡಿಯಲ್ಲಿ ಸೇಫ್ಟಿ ಲಾಕರ್; 20 ವರ್ಷಗಳಿಂದ ನೆಲದಡಿ ಅಡಗಿತ್ತು ರಹಸ್ಯ…!

ಹೊಸ ಮನೆ ಕೊಂಡ ಖುಷಿಯಲ್ಲಿದ್ದ ಮಹಿಳೆಗೆ ಕಾರ್ಪೆಟ್ ಅಡಿಯಲ್ಲಿ ಅಡಗಿದ್ದ ಸೇಫ್ಟಿ ಲಾಕರ್ ತಲೆಗೆ ಹುಳು ಬಿಟ್ಟುಕೊಳ್ಳುವಂತೆ ಮಾಡಿದೆ. ಅದು ದಶಕಗಳ ಹಿಂದಿನ ಲಾಕರ್ ಆಗಿರುವುದರಿಂದ ಅದನ್ನ ಹೇಗೆ ತೆರೆಯಬೇಕೆಂದು ತೋಚದೆ, ಲಿಜ಼್ ತನ್ನ ಆವಿಷ್ಕಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾಳೆ.

ಈ ಲಾಕರ್ ಅನ್ನು ಹೇಗೆ ತೆರೆಯಬಹುದು ಎಂದು ಜನರನ್ನು ಕೇಳಿದ್ದಾಳೆ. ನಾನು ನವೆಂಬರ್‌ನಲ್ಲಿ ಮನೆಯನ್ನು ಖರೀದಿಸಿದೆ, ಕೆಲ ದಿನಗಳ ನಂತರ ನೆಲದ ಮೇಲೆ ಕಾರ್ಪೆಟ್ ಒಳಗೆ ಅಡಗಿದ್ದ ಸೇಫ್ಟಿಲಾಕರ್ ಕಂಡುಕೊಂಡೆ. ಮನೆಯನ್ನು 70 ರ ದಶಕದ ಕೊನೆಯಲ್ಲಿ ನಿರ್ಮಿಸಲಾಗಿದೆ. ನಾನು ಅದನ್ನು ಹೇಗೆ ತೆರೆಯುವುದು? ಎಂದು ಕೇಳಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು.

ಅದೇನು ಮಾಯೆಯೊ ಲಾಕರ್ ಓಪನ್ ಮಾಡಲೇಬೇಕೆಂಬ ಹಠಕ್ಕೆ ಬಿದ್ದ ಲಿಜ್, ಹಲವಾರು ಲಾಕ್‌ಸ್ಮಿತ್‌ಗಳನ್ನು ಸಂಪರ್ಕಿಸಿದರು. ಆದರೆ ಅವರಿಗೆ ಲಾಕರ್ ತೆರೆಯಲಾಗಲಿಲ್ಲ. ಹೀಗಾಗಿ ಮೂಲತಃ ಸೇಫ್ಟಿ ತಯಾರಿಸಿದ ಕಂಪನಿಯನ್ನು ಸಹ ಸಂಪರ್ಕಿಸಿದಳು. ಆದರೆ ಅವರು ಈ ಸೇಫ್ಟಿ ಲಾಕರ್ ಸಂಯೋಜನೆ ಹೊಂದಿರಲಿಲ್ಲ. ಅದು ಹಳೆಯ ಲಾಕರ್ ಆಗಿರುವುದರಿಂದ, ಯಾರಾದರೂ ಸ್ಥಳೀಯರನ್ನು ಹುಡುಕುವಂತೆ ಕೇಳಿಕೊಂಡರು. ದಿನೇ ದಿನೇ ಹೆಚ್ಚೆಚ್ಚು ಶೇರ್ ಆಗ್ತಿದ್ದ ವಿಡಿಯೋ ನೆಟ್ಟಿಗರಲ್ಲು ಆ ಲಾಕರ್ ಒಳಗೆ ಏನಿರಬಹುದು ಎಂಬ ಕುತೂಹಲ ಸೃಷ್ಟಿಸಿತ್ತು. ಕೆಲವರಂತು ನೆಲದಡಿಯಲ್ಲಿ ರಹಸ್ಯ ಸುರಂಗ ಇರಬಹುದೆಂದು ಭಾವಿಸಿದ್ದರು.

ಇದೆಲ್ಲದರಿಂದ ಉತ್ಸುಕಳಾದ ಲಿಜ್, ಜಿಮ್ ಲಿಂಡಾ ಎನ್ನುವ ಪ್ರೊಫೆಷನಲ್ ಒಬ್ಬರನ್ನ ನೇಮಿಸಿದರು. ಲಿಂಡಾ ಅವರು ಕಷ್ಟಕರವಾದ ಲಾಕರ್ ಸಂಯೋಜನೆಗಳನ್ನು ಭೇದಿಸಲು ಸಮರ್ಥರಾಗಿದ್ದಾರೆ. ಜಿಮ್ ಲಿಂಡಾ ಅವರ ಮನೆಗೆ ಭೇಟಿ ನೀಡಿ, ಸೇಫ್ ಒಳಗೆ ಏನಿದೆ ಎಂದು ಕಂಡುಹಿಡಿಯಲು ಸಹಾಯ ಮಾಡಿದರು. ಈ ಬಗ್ಗೆ ಫಾಲೋ-ಅಪ್ ವಿಡಿಯೊ ಮಾಡಿದ ಲಿಜ್, ಜಿಮ್ ಸೇಫ್ ಅನ್ನು ತೆರೆಯುವುದನ್ನು ತೋರಿಸಿದರು. ಇಷ್ಟೆಲ್ಲಾ ಕುತೂಹಲ ಮೂಡಿಸಿದ್ದ ಘಟನೆಯ ಕ್ಲೈಮ್ಯಾಕ್ಸ್ ನಿರಾಶದಾಯಕವಾಗಿತ್ತು ಲಾಕರ್ ನಲ್ಲಿ ಏನು ಇರಲಿಲ್ಲ. ಆದರೂ ಲಿಜ್ ನೆಲದ ಕೆಳಗೆ ಸಿಕ್ಕ ಲಾಕರ್ ನಿಂದಲೆ ಉತ್ಸುಕರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...