alex Certify ಹೋಟೆಲ್ ಬಾಲ್ಕನಿಯಿಂದ ಜಿರಾಫೆಗೆ ಆಹಾರವುಣಿಸಿದ ಮಹಿಳೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್ ಬಾಲ್ಕನಿಯಿಂದ ಜಿರಾಫೆಗೆ ಆಹಾರವುಣಿಸಿದ ಮಹಿಳೆ: ವಿಡಿಯೋ ವೈರಲ್

ನೈರೋಬಿ: ತನ್ನ ಹೋಟೆಲ್ ಬಾಲ್ಕನಿಯಿಂದ ಜಿರಾಫೆಗಳಿಗೆ ಮಹಿಳೆಯು ಆಹಾರವುಣಿಸುವ ದೃಶ್ಯವೊಂದು ಅಂತರ್ಜಾಲದಲ್ಲಿ ಎಲ್ಲರ ಮನಗೆದ್ದಿದೆ. ನಿಮಗೆ ವನ್ಯಜೀವಿಗಳ ಬಗ್ಗೆ ಪ್ರೀತಿಯಿದ್ದರೆ, ಟ್ವಿಟರ್ನಲ್ಲಿರುವ ಈ ಸಣ್ಣ ಕ್ಲಿಪ್ ನಿಮಗೆ ಇಷ್ಟವಾದೀತು. Buitengebieden ಎಂಬ ಟ್ವೀಟರ್ ಖಾತೆಯಲ್ಲಿ ಇಂತಹ ಹಲವಾರು ಆಕರ್ಷಕ ವಿಡಿಯೋಗಳಿವೆ. ಈ ಪೈಕಿ ಒಂದರಲ್ಲಿ ಜಿರಾಫೆ ಮ್ಯಾನರ್ ಎಂಬ ಹೋಟೆಲ್ನ ಬಾಲ್ಕನಿಯಿಂದ ಮಹಿಳೆಯೊಬ್ಬರು ಜಿರಾಫೆಗಳಿಗೆ ಆಹಾರ ಕೊಡುತ್ತಿದ್ದಾರೆ.

ಅದ್ಭುತ ತಾಣದಲ್ಲಿರುವ ಈ ಹೋಟೆಲ್ನ ಬಾಲ್ಕನಿಯಲ್ಲಿ ಕುಳಿತ ಮಹಿಳೆಯ ಸಮೀಪಕ್ಕೆ ಎರಡು ಜಿರಾಫೆಗಳು ಬರುತ್ತವೆ. ಅವುಗಳನ್ನು ಒಂದಷ್ಟು ಆಹಾರದೊಂದಿಗೆ ಸ್ವಾಗತಿಸುವ ಮಹಿಳೆ, ಅವುಗಳಿಗೆ ಅದನ್ನು ತಿನ್ನಿಸುತ್ತಾರೆ.

“ಜಿರಾಫೆಗಳೊಂದಿಗೆ ಉಪಾಹಾರವನ್ನು ಹಂಚಿಕೊಳ್ಳುತ್ತಿದ್ದೇನೆ,” ಎಂಬ ಅಡಿಬರಹವನ್ನೂ ಈ ಚಿತ್ರಕ್ಕೆ ನೀಡಲಾಗಿದೆ. ಇದನ್ನು ಕಂಡ ಹಲವರು ಜಿರಾಫೆ ಮ್ಯಾನರ್ಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಜಿರಾಫೆ ಮ್ಯಾನರ್ನ ಆಸುಪಾಸಿನಲ್ಲಿ ಹಲವು ಜಿರಾಫೆಗಳಿವೆ. ಅತಿಥಿಗಳು ಅದೃಷ್ಟವಂತರಾಗಿದ್ದರೆ ಈ ಜಿರಾಫೆಗಳು ಬಂದು ಅವರ ಕೊಠಡಿಯ ಕಿಟಕಿಯಲ್ಲಿ ತಮ್ಮ ಉದ್ದ ಗೋಣಿನ ತುದಿಯಲ್ಲಿರುವ ಚಿಕ್ಕದಾದ ಮುಖವನ್ನಿಟ್ಟು ಇಣುಕುತ್ತವೆ. ಬಳಿಕ ಅರಣ್ಯದೊಳಗೆ ಸಾಗುತ್ತವೆ.

— Buitengebieden (@buitengebieden) May 1, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...