alex Certify ಹೆಲ್ಮೆಟ್ ಬದಲು ಪ್ಲಾಸ್ಟಿಕ್ ಕವರ್ ಧರಿಸಿದ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್ ಬದಲು ಪ್ಲಾಸ್ಟಿಕ್ ಕವರ್ ಧರಿಸಿದ ಮಹಿಳೆ….!

ಹೈದರಾಬಾದ್: ದೇಶದಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಚಾಲಕರು ಮಾತ್ರವಲ್ಲದೆ ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.

ಆದರೆ, ಹೈದರಾಬಾದ್ ನಲ್ಲಿ ಬೈಕ್ ನ ಹಿಂದೆ ಕೂತಿದ್ದ ಮಹಿಳೆಯೊಬ್ಬಳು ಹೆಲ್ಮೆಟ್ ಬದಲು ಪ್ಲಾಸ್ಚಿಕ್ ಕವರನ್ನು ತಲೆ ಮೇಲೆ ಧರಿಸಿರುವ ಫೋಟೋ ಇದೀಗ ವೈರಲ್ ಆಗಿದೆ.

ಬುಧವಾರ ಸೈಬರಾಬಾದ್ ಟ್ರಾಫಿಕ್ ಪೊಲೀಸರು, ಟ್ವಿಟ್ಟರ್‌ನಲ್ಲಿ ಮಹಿಳಾ ರೈಡರ್ ತನ್ನ ತಲೆಯ ಮೇಲೆ ಪ್ಲಾಸ್ಟಿಕ್ ಕವರ್ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ಲಾಸ್ಟಿಕ್ ಕವರ್ ಅನ್ನು ಹೆಲ್ಮೆಟ್ ಆಗಿ ಯಾರೂ ಬಳಸಬಾರದು. ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ. ಪೊಲೀಸರು ಮಾಡಿರುವ ಈ ಟ್ವೀಟ್ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...