alex Certify ಮುಖ್ತಾರ್​ ಅಬ್ಬಾಸ್​ ನಖ್ವಿ ಅವಧಿ ಮುಗಿದ ಬಳಿಕ ಬಿಜೆಪಿಯಲ್ಲಿಲ್ಲ ಮುಸ್ಲಿಂ ಸಂಸದರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ್ತಾರ್​ ಅಬ್ಬಾಸ್​ ನಖ್ವಿ ಅವಧಿ ಮುಗಿದ ಬಳಿಕ ಬಿಜೆಪಿಯಲ್ಲಿಲ್ಲ ಮುಸ್ಲಿಂ ಸಂಸದರು

ಮುಖ್ತಾರ್​ ಅಬ್ಬಾಸ್​ ನಖ್ವಿ ಅವರ ರಾಜ್ಯಸಭಾ ಅವಧಿ ಗುರುವಾರ ಅಂತ್ಯಗೊಳ್ಳಲಿದೆ. ಈ ಮೂಲಕ ಸಂಸತ್ತಿನ ಬಿಜೆಪಿಯ ಒಬ್ಬರೇ ಒಬ್ಬ ಮುಸ್ಲಿಂ ಸಂಸದ ಇಲ್ಲದಂತಾಗಿದೆ.

ಬುಧವಾರ ಸಚಿವ ಸಂಪುಟಕ್ಕೆ ನಖ್ವಿ ರಾಜೀನಾಮೆ ನೀಡಿದರು. ಮೂವರು ರಾಜ್ಯಸಭಾ ಮುಸ್ಲಿಮ್ ಸದಸ್ಯರ ಅವಧಿ ಇತ್ತೀಚೆಗೆ ಮುಕ್ತಾಯವಾಗಿತ್ತು. 57 ಸದಸ್ಯರ ಅವಧಿ ಮುಕ್ತಾಯಗೊಂಡ ಸಂದರ್ಭದಲ್ಲಿಯೇ ಅವರ ಅವಧಿ ಅಂತ್ಯಗೊಂಡಿತು.

15 ರಾಜ್ಯಗಳಲ್ಲಿ ರಾಜ್ಯಸಭೆಗೆ ಚುನಾವಣೆ ನಡೆದಿದ್ದು, ಅವುಗಳಲ್ಲಿ ಮುಸ್ಲಿಂ ಪ್ರತಿನಿಧಿಯನ್ನು ಪರಿಗಣಿಸಲಿಲ್ಲ. ಇನ್ನು ಇಬ್ಬರು ಕೇಂದ್ರದ ಮಾಜಿ ಸಚಿವರಾದ ಎಂ.ಜೆ. ಅಕ್ಬರ್​ ಮತ್ತು ಸೈಯದ್​ ಜಾಫರ್​ ಇಸ್ಲಾಂ ಅವಧಿ ಈಗಾಗಲೇ ಮುಗಿದಿದೆ.

ಬಿಜೆಪಿಯು ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಆದರೆ ಕೇಸರಿ ಪಕ್ಷವು ತನ್ನ ಸಂಸದರು ಎಲ್ಲಾ ಸಮುದಾಯಗಳಿಗಾಗಿ ಮತ್ತು ಕೆಲಸ ಮಾಡುತ್ತಾರೆ ಎಂದು ಸಮರ್ಥಿಸಿಕೊಂಡಿದೆ. ಜನಪ್ರತಿನಿಧಿ ಯಾವುದೇ ಧರ್ಮದ ಪ್ರತಿನಿಧಿಯಲ್ಲ ಎಂದು ಹೇಳಿದೆ.

ನೂಪುರ್ ಶರ್ಮಾ ನಾಲಿಗೆ ತಂದವರಿಗೆ ಎರಡು ಕೋಟಿ ರೂಪಾಯಿ ಘೋಷಿಸಿದ ಹರಿಯಾಣ ವ್ಯಕ್ತಿ

ದಶಕಗಳಿಂದದಲೂ ಬಿಜೆಪಿಯಿಂದ ಮುಸ್ಲಿಂ ಸಂಸದರು ಸಂಸತ್ತಿನಲ್ಲಿ ನಾಮ ನಿರ್ದೇಶನದ ಮೂಲಕ ಉಪಸ್ಥಿತಿಯನ್ನು ಹೊಂದಿದ್ದಾರೆ. ನಖ್ವಿ ಸ್ವತಃ ಮೂರು ಅವಧಿಗೆ, ನಜ್ಮಾ ಹೆಪ್ತುಲ್ಲಾ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಸಿಕಂದರ್​ ಬಖ್ತ್​ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.

ಸಾಕಷ್ಟು ಸಮಯದ ನಂತರ ಬಿಜೆಪಿ ಯಾವುದೇ ಮುಸ್ಲಿಂ ಸಂಸದರನ್ನು ಹೊಂದಿರುವುದಿಲ್ಲ. ಈ ಬೆಳವಣಿಗೆಯ ಬಗ್ಗೆ ಕೇಳಿದ ಪ್ರಶ್ನೆಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖ್ಯಸ್ಥ ಜಮಾಲ್​ ಸಿದ್ದಿಕಿ, ರಾಜಕೀಯವನ್ನು ಧರ್ಮದೊಂದಿಗೆ ಜೋಡಿಸಬಾರದು ಮತ್ತು ಜನರ ಪ್ರತಿನಿಧಿಗಳು ಯಾವುದೇ ಧರ್ಮದವರಲ್ಲ. ನಾವು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಪಕ್ಷವು ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ತಲಾ ಒಬ್ಬರು ಸೇರಿ ಕೆಲವು ರಾಜ್ಯಗಳಲ್ಲಿ ಮುಸ್ಲಿಂ ಶಾಸಕರನ್ನು ಹೊಂದಿದೆ. ಇತ್ತೀಚೆಗೆ ಹೈದ್ರಾಬಾದ್​ನಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ, ಹಿಂದೂಯೇತರ ಇತರೆ ಸಮುದಾಯಗಳಲ್ಲಿ ವಂಚಿತ ವರ್ಗಗಳನ್ನು ಬೆಳೆಸಲು ಕರೆ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...