alex Certify ಪತ್ನಿಯ ಎದುರೇ ಮತ್ತೊಬ್ಬಳ ಜತೆ ಪ್ರಥಮ ರಾತ್ರಿ: ಏಕ್ತಾ ಕಪೂರ್​ ಧಾರಾವಾಹಿಗೆ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಎದುರೇ ಮತ್ತೊಬ್ಬಳ ಜತೆ ಪ್ರಥಮ ರಾತ್ರಿ: ಏಕ್ತಾ ಕಪೂರ್​ ಧಾರಾವಾಹಿಗೆ ಆಕ್ರೋಶ

ಅಕ್ರಮ ಸಂಬಂಧದ ಬಗ್ಗೆ ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ಸುದ್ದಿಗಳು ಪ್ರಚಾರಕ್ಕೆ ಬರುತ್ತಿವೆ. ಕೊಲೆಯಂಥ ಪ್ರಕರಣಗಳು ಹೆಚ್ಚಿಗೆ ನಡೆಯುವುದೇ ಈ ಅನೈತಿಕ ಸಂಬಂಧದಿಂದ. ಆದರೆ ಇವುಗಳಿಗೆ ಪ್ರೇರಣೆ ಸಿನಿಮಾ ಹಾಗೂ ಧಾರಾವಾಹಿಗಳು ಎನ್ನುವುದು ಹೆಚ್ಚಿನವರ ಆರೋಪ. ಅದಕ್ಕೆ ಪೂರಕ ಎನ್ನುವಂತೆ ನಿರ್ದೇಶಕಿ ಏಕ್ತಾ ಕಪೂರ್​ ಅವರ ಧಾರಾವಾಹಿಯ ದೃಶ್ಯವೊಂದು ಇದೀಗ ವೈರಲ್​ ಆಗಿದ್ದು, ನೆಟ್ಟಿಗರನ್ನು ಆಕ್ರೋಶಕ್ಕೆ ತಳ್ಳಿದೆ.

17 ವರ್ಷಗಳ ಹಿಂದೆ ಅಂದರೆ 2005ರ ಧಾರಾವಾಹಿ ಇದಾಗಿದ್ದು, ಅಂದಿನಿಂದಲೇ ಹೇಗೆ ಅನೈತಿಕ ಸಂಬಂಧದ ವಿಷಬೀಜ ಬಿತ್ತಲಾಗಿತ್ತು ಎಂಬ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಕೈಸಾ ಯೇ ಪ್ಯಾರ್ ಹೈ’ (ಇದ್ಯಾವ ರೀತಿಯ ಪ್ರೀತಿ?) ಎನ್ನುವ ಧಾರಾವಾಹಿ ಇದಾಗಿದೆ.

ಇದರಲ್ಲಿ ಪ್ರಥಮ ರಾತ್ರಿಯ ದಿನ ಪತಿ ತನ್ನ ಪತ್ನಿಯ ಎದುರು ತನ್ನ ಗರ್ಲ್​ಫ್ರೆಂಡ್ ಅನ್ನು ಕರೆದುಕೊಂಡು ಬರುತ್ತಾನೆ. ನಿನ್ನ ಎದುರೇ ಈಕೆಯ ಜತೆ ನಾನು ಪ್ರಥಮ ರಾತ್ರಿ ಮಾಡುವುದಾಗಿ ಹೇಳುತ್ತಾನೆ. ಪತ್ನಿ ಕಣ್ಣೀರು ಹಾಕಿ ಹಾಗೆ ಮಾಡದಂತೆ ಬೇಡಿಕೊಳ್ಳುತ್ತಾಳೆ. ಆದರೆ ತಾನು ಹಾಗೆ ಮಾಡುವುದು ಎಂದು ಪತಿ ಹೇಳುತ್ತಾನೆ.

ನಿನಗೆ ನೋಡಲು ಆಗಿದ್ದರೆ ಹೊರಗೆ ಹೋಗು ಎನ್ನುತ್ತಾನೆ. ವಧು ಹೊರಗೆ ಹೋಗಲು ರೆಡಿಯಾದಾಗ, ಪತಿ, ಹೊರಗೆ ನಿನ್ನ ಅಪ್ಪ-ಅಮ್ಮ ಇದ್ದಾರೆ. ಏನು ಮಾಡುತ್ತಿ ನೋಡು ಎನ್ನುತ್ತಾನೆ. ತನ್ನ ಪಾಲಕರಿಗೆ ವಿಷಯ ತಿಳಿಯುತ್ತದೆ ಎಂದು ಭಯಪಟ್ಟುಕೊಳ್ಳುವ ವಧು ಕೋಣೆಯಲ್ಲಿಯೇ ಇದ್ದು, ಅಳುತ್ತಿರುತ್ತಾಳೆ.

ಅದೇ ಇನ್ನೊಂದೆಡೆ ಪತಿ ಹಾಗೂ ಸ್ನೇಹಿತೆಯ ಬಟ್ಟೆ ಈಕೆಯ ಮೇಲೆ ಎಸೆಯಲಾಗುತ್ತದೆ. ಅಂದರೆ ಅಲ್ಲಿ ಅವರ ಪ್ರಥಮ  ರಾತ್ರಿ ನಡೆಯುತ್ತದೆ. ಇದರ ವಿಡಿಯೋಗೆ ಭಾರಿ ಕಮೆಂಟ್​ಗಳು ಬಂದಿದ್ದು, ಇಂಥ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತಿರುವ ಧಾರಾವಾಹಿಗಳಿಗೆ ಧಿಕ್ಕಾರ ಎನ್ನಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...