alex Certify ಆಹಾರ ಹುಡುಕುತ್ತಾ ಗ್ರಾಮ‌ಕ್ಕೆ ಎಂಟ್ರಿ ಕೊಟ್ಟ ಕರಡಿಗಳು; ಆತಂಕಗೊಂಡು ಮನೆಹೊಕ್ಕ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಹುಡುಕುತ್ತಾ ಗ್ರಾಮ‌ಕ್ಕೆ ಎಂಟ್ರಿ ಕೊಟ್ಟ ಕರಡಿಗಳು; ಆತಂಕಗೊಂಡು ಮನೆಹೊಕ್ಕ ಗ್ರಾಮಸ್ಥರು

 

ಕಾಡಿನಿಂದ ಗ್ರಾಮದತ್ತ ನಡೆದು ಬಂದ ಎರಡು ಕಾಡು ಕರಡಿಗಳು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದವು. ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಉಮರ್‌ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬುರ್ಜಾ ಗ್ರಾಮದ ಹತ್ತಿರದಲ್ಲೆ ಕಾಡು ಇರುವುದರಿಂದ, ಅರಣ್ಯ ವ್ಯಾಪ್ತಿಯಿಂದ ಕರಡಿಗಳು ಗ್ರಾಮಕ್ಕೆ ಬಂದಿವೆ. ತಾಯಿ ಕರಡಿ ಮತ್ತು ಅದರ ಮರಿ ಹಾಡು ಹಗಲಲ್ಲೆ ಗ್ರಾಮದ ನಿವಾಸಿಗಳನ್ನ ಮನೆ ಸೇರುವಂತೆ ಮಾಡಿವೆ‌. ಆಹಾರ ಹುಡುಕುತ್ತಾ ತಾಯಿ ಮತ್ತು ಮರಿಕರಡಿ ಮಾನವರ ವಾಸಸ್ಥಾನಕ್ಕೆ ಆಗಮಿಸಿರಬಹುದು ಎಂದು ಗ್ರಾಮದವರು ಹೇಳಿದ್ದಾರೆ.

ಪ್ಲಾಸ್ಟಿಕ್ ಜಗ್‌ನಲ್ಲಿ ಮುಖ ಸಿಲುಕಿಸಿಕೊಂಡಿದ್ದ ಕರಡಿ ಮರಿಯ ರಕ್ಷಣೆ

ಕರಡಿಗಳ ಗ್ರಾಮ ಭೇಟಿಯನ್ನ ಸ್ಥಳೀಯರೆ ಚಿತ್ರೀಕರಿಸಿದ್ದಾರೆ. ಈ‌ ವಿಡಿಯೋ ಸಧ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ಕರಡಿಗಳು ಮನೆಯೊಂದಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಹಳ್ಳಿಯ ನಾಯಿಗಳು ಉಗ್ರವಾಗಿ ಬೊಗಳುವುದನ್ನು ಸೆರೆಹಿಡಿಯಲಾಗಿದೆ.

ಎಷ್ಟು ಹೊತ್ತು ಭಯದಿಂದ ಇರುವುದು ಎಂದು ದೈರ್ಯ ಮಾಡಿದ ಕೆಲವು ಗ್ರಾಮಸ್ಥರು ಕರಡಿಗಳನ್ನು ಬೆಂಕಿಯಿಂದ ಹೆದರಿಸಿ ಸಮೀಪದ ಮುತುರ್ಮಾ ಅರಣ್ಯ ವ್ಯಾಪ್ತಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಕರಡಿಗಳು ಯಾವುದೇ ಹಾನಿ ಮಾಡದೆ ಕಾಡಿಗೆ ಮರಳಿವೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...