alex Certify ಪರಸ್ತ್ರೀಯೊಂದಿಗಿದ್ದ ಪತಿಯನ್ನು ರೆಡ್​ಹ್ಯಾಂಡ್​​​ ಆಗಿ ಹಿಡಿದ ಪತ್ನಿ….! ಮುಂದೇನಾಯ್ತು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ತ್ರೀಯೊಂದಿಗಿದ್ದ ಪತಿಯನ್ನು ರೆಡ್​ಹ್ಯಾಂಡ್​​​ ಆಗಿ ಹಿಡಿದ ಪತ್ನಿ….! ಮುಂದೇನಾಯ್ತು ಗೊತ್ತಾ….?

ಪರ ಸ್ತ್ರೀಯೊಂದಿಗೆ ಇದ್ದ ಪತಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತ್ನಿಯು ಆಕೆಗೆ ಥಳಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಔರಂಗಾಬಾದ್​ನಲ್ಲಿ ನಡೆದ ಘಟನೆ ಇದಾಗಿದ್ದು ಇದರಲ್ಲಿ ಸೀರೆ ಧರಿಸಿದ್ದ ಮಹಿಳೆಯು ಹೋಟೆಲ್​​ನ ಹೊರಗಡೆ ಪಾರ್ಕ್ ಮಾಡಲಾಗಿದ್ದ ಕಾರಿನ ಬಳಿ ಓಡಿ ಬರುತ್ತಾಳೆ. ಕಾರಿನ ಒಳಗೆ ಕುಳಿತಿದ್ದ ಮಹಿಳೆಯನ್ನು ಹೊರಗೆ ಎಳೆದು ಥಳಿಸಲು ಆರಂಭಿಸುತ್ತಾಳೆ. ಹೊಡೆತ ತಿನ್ನುತ್ತಿರುವ ಮಹಿಳೆ ಮುಖಕ್ಕೆ ಬಿಳಿ ಬಣ್ಣ ದುಪ್ಪಟ್ಟಾ ಹಾಕಿಕೊಂಡಿದ್ದಳು. ಈ ದುಪ್ಪಟ್ಟ ಎಳೆಯಲು ಪತ್ನಿ ಯತ್ನಿಸುತ್ತಿದ್ದರೆ ಇನ್ನೊಂದೆಡೆ ಪತಿಯ ಬಳಿ ಈಕೆ ಯಾರು ಎಂದು ಆಕ್ರೋಶದಿಂದ ಪ್ರಶ್ನೆ ಮಾಡಿದ್ದಾಳೆ.

ಪತಿ ಮಾತ್ರ ತನ್ನ ಮಹಿಳೆಯನ್ನು ಪತ್ನಿಯ ಕೈಯಿಂದ ಕಾಪಾಡೋಕೆ ಇನ್ನಿಲ್ಲದ ಹರಸಾಹಸ ಪಟ್ಟಿದ್ದಾನೆ. ಬಹುಶಃ ಕಾರಿನಲ್ಲಿದ್ದ ಮಹಿಳೆ ಹಾಗೂ ವ್ಯಕ್ತಿ ಹೋಟೆಲ್​ನ ಒಳಗಡೆ ಹೋಗುವವರಿದ್ದರು ಎಂದು ಅಂದಾಜಿಸಲಾಗಿದೆ. ಇದೇ ಕ್ಷಣಕ್ಕೆ ಕಾಯುತ್ತಿದ್ದ ಪತ್ನಿ ಪತಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದ್ದು, ಎಲ್ಲರಿಗೂ ಮನೆಯ ಹೊರಗಡೆ ಸಿಗುವ ಬಿರಿಯಾನಿಯೇ ಬೇಕು. ಮನೆಯಲ್ಲೇ ಇರುವ ಅನ್ನ – ಸಾಂಬಾರು ಏಕೆ ಬೇಡ..? ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by GiDDa CoMpAnY -mEmE pAgE- (@giedde)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...