alex Certify ವಿವಾಹಿತ ದಂಪತಿಗಳನ್ನು ಕಾಡುತ್ತೆ ರೂಮ್‌ಮೇಟ್ ಸಿಂಡ್ರೋಮ್; ಇಲ್ಲಿದೆ ಈ ಸಮಸ್ಯೆ ಕುರಿತಾದ ಸಂಪೂರ್ಣ ವಿವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತ ದಂಪತಿಗಳನ್ನು ಕಾಡುತ್ತೆ ರೂಮ್‌ಮೇಟ್ ಸಿಂಡ್ರೋಮ್; ಇಲ್ಲಿದೆ ಈ ಸಮಸ್ಯೆ ಕುರಿತಾದ ಸಂಪೂರ್ಣ ವಿವರ…!

ಮದುವೆಯಾದ ಹೊಸತರಲ್ಲಿ ಸಂಗಾತಿಯೊಂದಿಗೆ ಪ್ರಯಾಣಿಸುವುದು ಮತ್ತು ಸಮಯ ಕಳೆಯುವುದು ಬಹಳ ಖುಷಿಕೊಡುತ್ತದೆ. ಈ ಸಮಯವನ್ನು ಹನಿಮೂನ್ ಪೀರಿಯಡ್‌ ಎಂದೇ ಕರೆಯಲಾಗುತ್ತದೆ. ವೈವಾಹಿಕ ಬದುಕಿಗೆ ಒಂದೆರಡು ವರ್ಷಗಳಾಗುತ್ತಿದ್ದಂತೆ ಪತಿ-ಪತ್ನಿಯರಲ್ಲಿ ಪರಸ್ಪರರ ಜೊತೆಯಲ್ಲಿ ಬದುಕುವ ಉತ್ಸಾಹವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ರೂಮ್‌ಮೇಟ್ ಸಿಂಡ್ರೋಮ್ ಕೂಡ ಅವರನ್ನು ಕಾಡಬಹುದು. ಇದು ವಿವಾಹಿತ ದಂಪತಿಗಳಲ್ಲಿ ಮಾತ್ರ ಕಂಡುಬರುತ್ತದೆ.

ರೂಮ್‌ಮೇಟ್‌ ಸಿಂಡ್ರೋಮ್‌ಗೆ ತುತ್ತಾದರೆ ಸಂಬಂಧಗಳಲ್ಲಿ ಥ್ರಿಲ್ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸರಳ ಪದಗಳಲ್ಲಿ ಹೇಳುವುದಾದರೆ ರೂಮ್‌ಮೇಟ್ ಸಿಂಡ್ರೋಮ್ ಎಂದರೆ ದಂಪತಿಗಳ ನಡುವೆ ಹೊಸತನ ಅಥವಾ ಉತ್ಸಾಹದ ಕೊರತೆ. ಅವರು ಪ್ರಾಕ್ಟಿಕಲ್‌ ಆಗಿ ಬದುಕಲಾರಂಭಿಸುತ್ತಾರೆ. ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡುವುದಿಲ್ಲ. ರೂಮ್‌ಮೇಟ್ ಸಿಂಡ್ರೋಮ್‌ನ ಕಾರಣ ಮತ್ತು ಅದನ್ನು ತಪ್ಪಿಸಲು ಏನು ಮಾಡಬೇಕು ಎಂಬುದನ್ನು ತಿಳಿಯೋಣ.

ರೂಮ್‌ಮೇಟ್ ಸಿಂಡ್ರೋಮ್‌ಗೆ ಕಾರಣವೇನು ?

ದಂಪತಿಗಳು ತಮ್ಮ ಸಂಬಂಧಗಳನ್ನು ಎಂದಿಗೂ ಉದ್ದೇಶಪೂರ್ವಕವಾಗಿ ಹಾಳು ಮಾಡಿಕೊಳ್ಳುವುದಿಲ್ಲ. ಪರಸ್ಪರರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ.ಅಂತಹ ಪರಿಸ್ಥಿತಿಯಲ್ಲಿ ಅನೇಕ ವಿಷಯಗಳ ಬಗ್ಗೆ ಗಮನ ಕೊಡಬೇಕು. ಮನೆಯನ್ನು ನಿರ್ವಹಿಸುವುದು, ಮಕ್ಕಳನ್ನು ಬೆಳೆಸುವುದು ಅಥವಾ ಕುಟುಂಬವನ್ನು ನೋಡಿಕೊಳ್ಳುವುದು ಹೀಗೆ ಹತ್ತಾರು ಸಂಗತಿಗಳು. ಆರಂಭದ ಪ್ರೀತಿ, ಸಮಯ ಮತ್ತು ಜವಾಬ್ದಾರಿಗಳೊಂದಿಗೆ ಕ್ಷೀಣಿಸುವುದು ಸಹಜ. ಕೆಲವೊಮ್ಮೆ ಇದು ಸಮಸ್ಯೆಯಾಗುತ್ತದೆ. ಏಕೆಂದರೆ ಜವಾಬ್ದಾರಿಗಳ ನಡುವೆ ಮೋಜು ಮತ್ತು ಪ್ರಣಯಕ್ಕೆ ಸಮಯ ಮೀಸಲಿಡುವುದನ್ನೇ ಮರೆತುಬಿಡುತ್ತಾರೆ.

ರೂಮ್‌ಮೇಟ್ ಸಿಂಡ್ರೋಮ್ ಅನ್ನು ಎದುರಿಸುವುದು ಹೇಗೆ ?

ಸಂಗಾತಿಯ ಆಯ್ಕೆಗಳ ಬಗ್ಗೆ ಗಮನ ಕೊಡಿ

ನಿಮ್ಮ ಸಂಗಾತಿ ಇಷ್ಟಪಡುವ ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಡಿ. ಎಷ್ಟೇ ಬ್ಯುಸಿಯಾಗಿದ್ದರೂ ಸಣ್ಣಪುಟ್ಟ ವಿಷಯಗಳ ಬಗ್ಗೆ ಗಮನಕೊಡುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಬಹುದು. ಸಂಗಾತಿಯ ಆಯ್ಕೆಗಳ ಬಗ್ಗೆ ಕಾಳಜಿ ವಹಿಸಿದಾಗ ಪ್ರೀತಿ ಹೆಚ್ಚುತ್ತದೆ.

ಸಣ್ಣ ಸಣ್ಣ ವಿಷಯಗಳಿಗೂ ಖುಷಿಪಡಿ

ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ ಸಂಬಂಧಗಳಲ್ಲಿ ತಾಜಾತನವನ್ನು ಕಾಪಾಡಿಕೊಳ್ಳಬಹುದು. ಸಂಗಾತಿಯ ಸಣ್ಣ ಸನ್ನೆಗಳನ್ನೂ ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ ನಿಮ್ಮ ಸಂಗಾತಿಗೆ ಪಿಜ್ಜಾ ತಿನ್ನಬೇಕೆಂದು ಅನಿಸಿದ್ದು, ಹೊರಗೆ ಕರೆದೊಯ್ಯಲು ಸಾಧ್ಯವಾಗಿಲ್ಲ ಎಂದುಕೊಳ್ಳಿ. ಅದನ್ನು ನೀವೇ ತರಬಹುದು ಅಥವಾ ತಯಾರಿಸಿ ಕೊಡುವ ಮೂಲಕ ಸರ್‌ಪ್ರೈಸ್‌ ನೀಡಬಹುದು. ಪ್ರತಿ ಹಂತದಲ್ಲೂ ನೀವು ಅವರೊಂದಿಗೆ ಇದ್ದೀರಿ ಎಂಬುದನ್ನು ಖಾತ್ರಿಪಡಿಸಿ.

ನಿಮ್ಮ ವರ್ತನೆ ದಿನಚರಿಯಂತೆ ಇರಬಾರದು. ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವುದರಿಂದ ಸಂಗಾತಿಯನ್ನು ಮೆಚ್ಚಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ವಿಶೇಷವಾದ ತಿನಿಸುಗಳನ್ನು ತಯಾರಿಸಿದ್ರೆ ಮತ್ತೊಮ್ಮೆ ಸುಂದರ ಉಡುಗೊರೆಯ ಮೂಲಕ ಅವರನ್ನು ಸಂತೋಷಪಡಿಸಿ. ಇದರಿಂದ ಸಂಬಂಧಗಳು ಹೆಚ್ಚು ಗಟ್ಟಿಯಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...