alex Certify ದಾಂಪತ್ಯದಲ್ಲಿ ಬಿರುಕು ಬಾರದಿರಲು ಪತಿ-ಪತ್ನಿ ಎಂದಿಗೂ ಮಾಡಬೇಡಿ ಈ ತಪ್ಪು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯದಲ್ಲಿ ಬಿರುಕು ಬಾರದಿರಲು ಪತಿ-ಪತ್ನಿ ಎಂದಿಗೂ ಮಾಡಬೇಡಿ ಈ ತಪ್ಪು……!

ಇತ್ತೀಚಿನ ದಿನಗಳಲ್ಲಿ ಬಹುಬೇಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ದಂಪತಿ ಬೇರೆಯಾಗ್ತಾರೆ. ದಾಂಪತ್ಯ ಜೀವನದ ಬಗ್ಗೆ ಹೇಳಲಾಗಿರುವ ಕೆಲ ಮಾತುಗಳನ್ನು ಪಾಲಿಸಿದ್ರೆ ಗಂಡ-ಹೆಂಡತಿ ಮಧ್ಯೆ ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ. ಪರಸ್ಪರರ ಜೀವನ ಸುಖ, ಸಂತೋಷದಿಂದ ಕೂಡಿರುತ್ತದೆ.

ದಾಂಪತ್ಯದಲ್ಲಿ ಸಂಯಮ ಬಹಳ ಮುಖ್ಯ. ಲೈಂಗಿಕ ಬಯಕೆ, ಕೋಪ, ದುರಾಸೆ, ಅಹಂಕಾರ ಸೇರಿದಂತೆ ಮಾನಸಿಕ ಪ್ರಚೋದನೆಗಳ ಮೇಲೆ ನಿಯಂತ್ರಣವಿಡಬೇಕು. ರಾಮ-ಸೀತೆ ಸಂಯಮ ಹಾಗೂ ಪ್ರೀತಿಯಿಂದ ಜೀವನ ಕಳೆದ್ರು. ಎಂದೂ ಮಾನಸಿಕ ಹಾಗೂ ದೈಹಿಕವಾಗಿ ನಿಯಂತ್ರಣ ಕಳೆದುಕೊಳ್ಳಲಿಲ್ಲ.

ಜೀವನದಲ್ಲಿ ತೃಪ್ತಿ ಬಹಳ ಮುಖ್ಯ. ಸಮಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಯಾವ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆಯೋ ಅದ್ರಲ್ಲಿ ತೃಪ್ತಿ ಕಾಣಬೇಕು. ಎಂದೂ ಪರಸ್ಪರ ಕೊರತೆ ನೋಡಬಾರದು.

ವಿವಾಹ ಜೀವನದಲ್ಲಿ ಮಕ್ಕಳು ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಪತಿ-ಪತ್ನಿ ಸಂಬಂಧ ಮಕ್ಕಳಿಂದ ಬಲಗೊಳ್ಳುತ್ತದೆ. ರಾಮ ಹಾಗೂ ಸೀತೆ ಸಂಬಂಧವನ್ನು ಪವಿತ್ರಗೊಳಿಸುವಲ್ಲಿ ಲವ-ಕುಶ ಮಹತ್ವದ ಪಾತ್ರ ವಹಿಸಿದ್ದರು.

ದಾಂಪತ್ಯದಲ್ಲಿ ಸಂವೇದನಾಶೀಲತೆಯಿರಬೇಕು. ಪತಿ-ಪತ್ನಿ ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು. ರಾಮ-ಸೀತೆ ಪರಸ್ಪರ ಹೇಳದೆ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು.

ದಾಂಪತ್ಯ ಜೀವನದಲ್ಲಿ ಪರಸ್ಪರ ತ್ಯಾಗ ಹಾಗೂ ಸಮರ್ಪಣೆ ಕೂಡ ಅವಶ್ಯಕ. ಪತಿಗಾಗಿ ಪತ್ನಿ, ಪತ್ನಿಗಾಗಿ ಪತಿ ಕೆಲವೊಂದು ಆಸೆ, ಬಯಕೆಗಳನ್ನು ತ್ಯಾಗ ಮಾಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...