alex Certify Viral Video | ಬೆನ್ನಿನಿಂದ ಕ್ಯಾಚ್​ ಹಿಡಿದ ವಿಕೆಟ್​ ಕೀಪರ್​ : ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಬೆನ್ನಿನಿಂದ ಕ್ಯಾಚ್​ ಹಿಡಿದ ವಿಕೆಟ್​ ಕೀಪರ್​ : ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು

ವಿಕೆಟ್​ ಕೀಪರ್​​ ಕೈಯಲ್ಲಿ ಕ್ಯಾಚ್​ ಹಿಡಿದು ವಿಕೆಟ್​ ಪಡೆಯೋದನ್ನ ಕ್ರಿಕೆಟ್​ ನಲ್ಲಿ ನೀವು ಸಾಕಷ್ಟು ಸಾರಿ ನೋಡಿಯೇ ಇರ್ತೀರಿ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಇದುವರೆಗೂ ಯಾವುದೇ ವಿಕೆಟ್​ ಕೀಪರ್​ ಕ್ಯಾಚ್​ ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕ್ಯಾಚ್​ ಹಿಡಿದಿದ್ದಾರೆ.

ಕೆಪಿಎ 123 ಹಾಗೂ ಕೆಸಿಎಸ್​ಎ ಕ್ಯಾಲಿಕಟ್​ ನಡುವೆ ಕೇರಳ ಪ್ರೀಮಿಯರ್​ ಲೀಗ್​ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿಕೆಟ್​ ಕೀಪರ್​ ಈ ಅಸಾಧಾರಣ ಕ್ಯಾಚ್​ ಹಿಡಿದಿದ್ದಾರೆ.‌

ಕೆಪಿಎ 123 ತಂಡದ ವಿಕೆಟ್​ ಕೀಪರ್​ ಕ್ಯಾಚ್​ ಹಿಡಿಯಲು ತನ್ನ ಬಲಕ್ಕೆ ಡೈವ್​ ಮಾಡಿದ್ದರು. ಟ್ವಿಸ್ಟ್​ ಏನೆಂದರೆ ಬಾಲ್​ ಅವರ ಕೈಗೆ ಸಿಕ್ಕಿರಲಿಲ್ಲ. ಇನ್ನೇನು ವಿಕೆಟ್​ ಪಡೆಯೋದು ಮಿಸ್​ ಆಯ್ತು ಅಂದುಕೊಳ್ಳುವಷ್ಟರಲ್ಲಿ ಡೈವ್​ ಹೊಡೆದಿದ್ದ ವಿಕೆಟ್​ ಕೀಪರ್​ ಬೆನ್ನಿನ ಮೇಲೆ ಚೆಂಡು ಬಿದ್ದಿದ್ದು ವಿಕೆಟ್​ ಕೀಪರ್​ ಬಾಲ್​ನ್ನು ಹಿಡಿದುಕೊಂಡಿದ್ದಾರೆ.

ವಿಕೆಟ್​ ಕೀಪರ್​ ಈ ರೀತಿಯ ರೋಮಾಂಚನಾಕಾರಿ ಕ್ಯಾಚ್​ ಹಿಡಿದ ಬಳಿಕ ಅವರ ತಂಡದವರು ಅಭಿನಂದಿಸಲು ಖುಷಿಯಿಂದ ಮುಗಿಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...