alex Certify ತಂಪು ಪಾನೀಯದ ಬಾಟಲ್​ ಪೂರ್ಣ ತುಂಬಿರುವುದಿಲ್ಲ ಏಕೆ……? ತಿಳಿದುಕೊಳ್ಳಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಪು ಪಾನೀಯದ ಬಾಟಲ್​ ಪೂರ್ಣ ತುಂಬಿರುವುದಿಲ್ಲ ಏಕೆ……? ತಿಳಿದುಕೊಳ್ಳಿ ಈ ವಿಷಯ

ಯಾವುದೇ ತಂಪು ಪಾನೀಯ ತೆಗೆದುಕೊಳ್ಳಿ ಬಾಟಲ್​ ಪೂರ್ಣ ತುಂಬಿರುವುದಿಲ್ಲ. ಇದನ್ನು ಗಮನಿಸಿಯೇ ಇರುತ್ತೀರಿ. ಆದರೆ, ಏಕೆ ಖಾಲಿ ಬಿಟ್ಟಿರುತ್ತಾರೆಂದು ತಿಳಿದಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ ತಿಳಿದುಕೊಳ್ಳಿ.

ಬೇಸಿಗೆಯ ಸಮಯದಲ್ಲಿ ಬಾಯಾರಿಕೆಯನ್ನು ನೀಗಿಸಲು ತಂಪು ಪಾನೀಯ ಬಯಸುವುದು ಸಾಮಾನ್ಯ. ಹೆಚ್ಚಿನ ಕೆಫೀನ್​ ಮತ್ತು ಸಕ್ಕರೆಯ ಅಂಶದ ಕಾರಣದಿಂದಾಗಿ ತಂಪು ಪಾನೀಯಗಳು ಹೈಡ್ರೇಟ್​ ಮಾಡಲು ಸಹಾಯ ಮಾಡುತ್ತದೆ.

ಎಲ್ಲರೂ ಗಮನಿಸಿರುವಂತೆ ತಂಪು ಪಾನೀಯ ಬಾಟಲಿಗಳಲ್ಲಿ ಜಾಗ ಖಾಲಿ ಇರುತ್ತದೆ ಏಕೆ ಎಂಬ ಪ್ರಶ್ನೆ ಅನೇಕರಲ್ಲಿರಬಹುದು? ತಯಾರಕರು ಹೆಚ್ಚಿನ ಪಾನೀಯವನ್ನು ತುಂಬಲು ಆ ಜಾಗವನ್ನು ಬಳಸಬಹುದಲ್ಲವೇ? ಎಂಬ ಆಲೋಚನೆಯೂ ಬಂದಿರಬಹುದು.

ಈ ಪಾನೀಯಗಳು ತಮ್ಮ ಸುವಾಸನೆ ಮತ್ತು ರಿಫ್ರೆಶ್​ ಸ್ವಭಾವಕ್ಕೆ ಸಹಾಯ ಮಾಡಲು ಹೆಚ್ಚಿನ ಕಾರ್ಬನ್​ ಡೈಆಕ್ಸೆಡ್​ ಹೊಂದಿರುತ್ತವೆ. ಹೆಚ್ಚಿನ ತಾಪಮಾನ ಇದ್ದಾಗ ಈ ಗ್ಯಾಸ್​ ಸ್ವಲ್ಪಮಟ್ಟಿಗೆ ವಿಸ್ತರಿಸುತ್ತದೆ. ಅಷ್ಟು ಮಾತ್ರವಲ್ಲದೆ ಬಾಟಲಿಗಳನ್ನು ಕೆಲಮೊಮ್ಮೆ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಈ ಕಾರಣಕ್ಕಾಗಿ ಬಾಟಲಿಯೊಳಗಿನ ನೀರು ಹಿಗ್ಗುತ್ತದೆ.

ಕಡಿಮೆ ತಾಪಮಾನದಲ್ಲಿ ನೀರಿನ ವಿಸ್ತರಣೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಇಂಗಾಲದ ಡೈಆಕ್ಸೈಡ್​ ಬಾಟಲಿಯು ಸ್ಫೋಟಿಸಲು ಕಾರಣವಾಗಬಹುದು. ಇದು ಪಾನೀಯವನ್ನು ನಷ್ಟ ಮಾಡುವುದಲ್ಲದೇ, ಸುತ್ತಮುತ್ತಲಿನ ಪ್ರದೇಶವು ಸಿಹಿ ಮತ್ತು ಅಂಟು ದ್ರವ ಹರಡಲು ಕಾರಣವಾಗಬಹುದು. ಒಟ್ಟಾರೆ ವಾತಾವರಣದ ಉದ್ದೇಶ ಇಟ್ಟುಕೊಂಡು ಖಾಲಿ ಜಾಗ ಬಿಟ್ಟಿರಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...