alex Certify ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿ ಪಿಎಂ ಭಾವಚಿತ್ರವಿದ್ದರೆ ತಪ್ಪೇನು ? ಕೇರಳ ಹೈಕೋರ್ಟ್‌ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿ ಪಿಎಂ ಭಾವಚಿತ್ರವಿದ್ದರೆ ತಪ್ಪೇನು ? ಕೇರಳ ಹೈಕೋರ್ಟ್‌ ಪ್ರಶ್ನೆ

ಕೋವಿಡ್-19 ಲಸಿಕಾ ಪ್ರಮಾಣಪತ್ರಗಳಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ಚುನಾಯಿತರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವಿರುವುದರಲ್ಲಿ ತಪ್ಪೇನಿದೆ ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ.

ಪ್ರಮಾಣ ಪತ್ರದಿಂದ ಪ್ರಧಾನಿ ಭಾವಚಿತ್ರವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಪ್ರಾಪ್ತತೆಯನ್ನು ಪರೀಕ್ಷಿಸಿದ ಹೈಕೋರ್ಟ್‌ನ ನ್ಯಾಯಾಧೀಶ ಪಿವಿ ಕುನ್ಹಿಕೃಷ್ಣನ್, ಪ್ರಧಾನಿಯ ಬಗ್ಗೆ ತಮಗೇನಾದರೂ ನಾಚಿಕೆ ಪಡುವಂಥದ್ದು ಇದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.

ದೇಶದ ಜನರಿಂದಲೇ ಚುನಾಯಿತರಾಗಿ ಅಧಿಕಾರಕ್ಕೆ ಬಂದಿರುವ ಪ್ರಧಾನ ಮಂತ್ರಿಯ ಭಾವಚಿತ್ರವನ್ನು ಪ್ರಮಾಣ ಪತ್ರದಲ್ಲಿ ಇಡುವುದು ತಪ್ಪೇನಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ರೋಹಿತ್- ಕೊಹ್ಲಿ ಮಧ್ಯೆ ಮುಂದುವರೆದ ಮುನಿಸು…..? ಮಗಳ ಹುಟ್ಟುಹಬ್ಬದ ಹೆಸರಿನಲ್ಲಿ ಏಕದಿನ ತಂಡದಿಂದ ಹೊರ ಬಿದ್ದ ವಿರಾಟ್

ಅನ್ಯ ದೇಶಗಳಲ್ಲಿ ಇಂಥ ಅಭ್ಯಾಸವಿಲ್ಲದೇ ಇರುವ ವಿಷಯವನ್ನು ಅರ್ಜಿದಾರರ ಪರ ವಕೀಲರು ಮುಂದಿಟ್ಟ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಅವರಿಗೆ ತಮ್ಮ ಪ್ರಧಾನಿಗಳ ಮೇಲೆ ಹೆಮ್ಮೆ ಇಲ್ಲದೇ ಇರಬಹುದು, ನಮಗೆ ಹೆಮ್ಮೆ ಇದೆ” ಎಂದಿದ್ದಾರೆ.

“ನೀವೇಕೆ ಪ್ರಧಾನಿಯ ಬಗ್ಗೆ ನಾಚಿಕೆ ಪಡುತ್ತಿದ್ದೀರಿ ? ಜನರಿಂದ ಪಡೆದ ಬಹುಮತದಿಂದಲೇ ಅವರು ಅಧಿಕಾರಕ್ಕೆ ಬಂದಿದ್ದಾರೆ….. ನಮಗೆ ಭಿನ್ನವಾದ ರಾಜಕೀಯ ನಿಲುವುಗಳು ಇರಬಹುದು, ಆದರೆ ಅವರು ನಮ್ಮ ಪ್ರಧಾನ ಮಂತ್ರಿ” ಎಂದು ಕೋರ್ಟ್ ಮುಂದುವರೆದು ಹೇಳಿದೆ.

ಪ್ರಮಾಣ ಪತ್ರದಲ್ಲಿ ಪ್ರಧಾನಿಯ ಭಾವಚಿತ್ರವು ವೈಯಕ್ತಿಕ ಸ್ವಾತಂತ್ರ‍್ಯಕ್ಕೆ ಧಕ್ಕೆ ತಂದಿದ್ದು, ಮತದಾರರ ಮನಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ ಅರ್ಜಿದಾರರ ಪರ ವಕೀಲ ಅಜಿತ್‌ ಜೋಯ್, ರಾಜಕೀಯ ಭಿನ್ನಭಿಪ್ರಾಯಗಳಿಗಿಂತಲೂ, ಸಾರ್ವಜನಿಕ ದುಡ್ಡಿನಲ್ಲಿ ಮಾಡುವ ಅಭಿಯಾನಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ದೃಷ್ಟಿಯಿಂದ ನೋಡಬೇಕಾಗಿದೆ ಎಂದಿದ್ದಾರೆ.

ಕೆಲ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಇನ್ನೇನು ಬರಲಿರುವ ಕಾರಣ, ಇಂಥ ನಡೆಗಳಿಂದ ಮತದಾರರ ಮನಗಳ ಮೇಲೆ ಪ್ರಭಾವ ಬೀರಿದಂತಾಗುತ್ತದೆ ಎಂದು ವಕೀಲರು ತಿಳಿಸಿದ್ದರು.

ಅರ್ಜಿಯಲ್ಲಿ ಯಾವುದಾದರೂ ಪ್ರಾಪ್ತ ವಾದಗಳಿವೆಯೇ ಎಂದು ಪರಿಶೀಲಿಸಿ ನೋಡುವುದಾಗಿ ನ್ಯಾಯಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...