alex Certify ಪ್ರತಿ ದಿನ ಬಿಳಿ ಬ್ರೆಡ್ ಸೇವನೆ ಮಾಡ್ತೀರಾ…..? ಎಚ್ಚರ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಬಿಳಿ ಬ್ರೆಡ್ ಸೇವನೆ ಮಾಡ್ತೀರಾ…..? ಎಚ್ಚರ……!

ಬಹುಬೇಗ ಸಿದ್ಧವಾಗುವ ಆಹಾರದಲ್ಲಿ ಬ್ರೆಡ್‌ ಕೂಡ ಸೇರಿದೆ. ಸಮಯ ಇಲ್ಲದ ಈ ಕಾಲದಲ್ಲಿ ಜನರು ಬೆಳಿಗ್ಗೆ ಉಪಹಾರಕ್ಕೆ ಹೆಚ್ಚಾಗಿ ಬ್ರೆಡ್‌ ತಿನ್ನುತ್ತಾರೆ. ನೀವೂ ಬ್ರೆಡ್‌ ಪ್ರೇಮಿಗಳಾಗಿದ್ದರೆ ಇಂದಿನಿಂದಲೇ ಈ ಬ್ರೆಡ್‌ ಸೇವನೆ ಬಿಡಿ. ಯಾಕೆಂದ್ರೆ ಬ್ರೆಡ್‌ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಸಂಶೋಧನೆ ಒಂದರಿಂದ ಪತ್ತೆ ಆಗಿದೆ.

ಜರ್ನಲ್ ಆಫ್ ನ್ಯೂಟ್ರಿಯೆಂಟ್ಸ್’ ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಬಿಳಿ ಬ್ರೆಡ್‌ ಮತ್ತು  ಆಲ್ಕೋಹಾಲ್ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೊರೆಕ್ಟಲ್ ಕ್ಯಾನ್ಸರ್ ನಿಧಾನವಾಗಿ ಹೆಚ್ಚಾಗುತ್ತದೆ. ಹಾಗಾಗಿ ಅದ್ರ ಲಕ್ಷಣವನ್ನು ಬೇಗ ಪತ್ತೆ ಮಾಡಲು ಸಾಧ್ಯವಿಲ್ಲ. ಕರುಳು ಹಾಗೂ ಗುದದ್ವಾರದ ಕೊನೆಯ ತುದಿಯಲ್ಲಿ ಈ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲೇ ಇದು ಪತ್ತೆ ಆದ್ರೆ ಚಿಕಿತ್ಸೆ ಸುಲಭ.

ಚೀನಾ ಝೆಜಿಯಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆ ಸಂಶೋಧಕರು ಈ ಸಂಶೋಧನೆ ನಡೆಸಿದ್ದಾರೆ. ಪ್ರತಿ ದಿನ 139 ಆಹಾರ ಪದಾರ್ಥಗಳು ಮತ್ತು ಅವುಗಳಲ್ಲಿರುವ ಪೋಷಕಾಂಶಗಳನ್ನು ಪರೀಕ್ಷಿಸಲಾಯಿತು. ಬಿಳಿ ಬ್ರೆಡ್‌ ಮತ್ತು ಆಲ್ಕೋಹಾಲ್ ಸೇವನೆ ಮಾಡ್ತಿದ್ದ ಸುಮಾರು 1,466 ಜನರಲ್ಲಿ 13 ವರ್ಷಗಳಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಪ್ರಕರಣ  ಕಂಡುಬಂದಿವೆ. ಬಿಳಿ ಬ್ರೆಡ್‌ ನಲ್ಲಿ ಕಾರ್ಸಿನೋಜೆನ್ ಸಂಯುಕ್ತಗಳು ಕಂಡು ಬಂದಿದ್ದು, ಇದು ಆರೋಗ್ಯಕ್ಕೆ ಹಾನಿಕರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...