alex Certify ಆಹಾರ ನೀಡುತ್ತಿದ್ದ ವೃದ್ದೆ ಅನಾರೋಗ್ಯಕ್ಕೀಡಾದಾಗ ಸಾಂತ್ವನ ಹೇಳಿದ ಕೋತಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ನೀಡುತ್ತಿದ್ದ ವೃದ್ದೆ ಅನಾರೋಗ್ಯಕ್ಕೀಡಾದಾಗ ಸಾಂತ್ವನ ಹೇಳಿದ ಕೋತಿ: ವಿಡಿಯೋ ವೈರಲ್

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಂಧ ವಿಶೇಷವಾದದ್ದು. ಕೋತಿ ಹಾಗೂ ವೃದ್ಧೆಯ ಈ ವಿಡಿಯೋ ಕೂಡ ಇದೇ ಮಾತಿಗೆ ಸಾಕ್ಷಿ ಎಂಬಂತಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಕಣ್ಣಂಚನ್ನ ತೇವಗೊಳಿಸಿದೆ.

ಈ ವಿಡಿಯೋದಲ್ಲಿ ವೃದ್ಧೆ ಹಾಸಿಗೆಯ ಮೇಲೆ ಮಲಗಿರೋದನ್ನ ಕಾಣಬಹುದಾಗಿದೆ. ಕೋತಿಯೊಂದು ಆಕೆಯ ಪಕ್ಕದಲ್ಲಿ ಕುಳಿತಿದೆ. ಈ ವಿಡಿಯೋಗೆ ನೀಡಲಾದ ಶೀರ್ಷಿಕೆಯ ಪ್ರಕಾರ, ವೃದ್ಧೆ ಈ ಕೋತಿಗೆ ನಿತ್ಯವೂ ತಿನ್ನಲು ಆಹಾರವನ್ನ ನೀಡುತ್ತಿದ್ದಳು.

ಆದರೆ ಆಕೆ ಅನಾರೋಗ್ಯದ ಹಿನ್ನೆಲೆ ಕೆಲ ಕಾಲ ಕೋತಿಗೆ ಕಾಣಸಿಗದ ಹಿನ್ನೆಲೆ ಕೋತಿಯು ಆಕೆಯನ್ನ ಹುಡುಕಿಕೊಂಡು ಮನೆಗೆ ಬಂದಿದೆ.

ವಿಡಿಯೋದಲ್ಲಿ ಕೋತಿಯು ವೃದ್ಧೆಯನ್ನ ಪ್ರೀತಿಯಿಂದ ಆಲಂಗಿಸುತ್ತಿರೋದನ್ನೂ ಸಹ ಕಾಣಬಹುದಾಗಿದೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್​ ಆಗಿದ್ದು 3 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...