alex Certify ಲೋಕಲ್ ಟ್ರೈನ್ ನಲ್ಲಿ ಇಂಡಿಯನ್ ಕ್ರಿಕೆಟರ್; ಇವ್ರೆನಾ ಅಂತಾ ಗೂಗಲ್ ಮಾಡಿದ ಪ್ರಯಾಣಿಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಲ್ ಟ್ರೈನ್ ನಲ್ಲಿ ಇಂಡಿಯನ್ ಕ್ರಿಕೆಟರ್; ಇವ್ರೆನಾ ಅಂತಾ ಗೂಗಲ್ ಮಾಡಿದ ಪ್ರಯಾಣಿಕರು….!

ಶಾರ್ದುಲ್ ಠಾಕುರ್ ಭಾರತೀಯ ಕ್ರಿಕೆಟ್ ನ ಯುವ ಸ್ಟಾರ್ ಆಟಗಾರ. ಕಳೆದ ಹಲವು ವರ್ಷಗಳಿಂದ ಕ್ರಿಕೆಟ್ ದುನಿಯಾದಲ್ಲಿ ಕಮಾಲ್ ಮಾಡ್ತಿರುವ ಶಾರ್ದುಲ್ ಒಂದು ಕಾಲದಲ್ಲಿ ನಮ್ಮಂತೆಯೆ ಸಾಮಾನ್ಯ ಹುಡುಗ.

ಲೋಕಲ್ ಟ್ರೈನ್ ನಲ್ಲಿ ತಿರುಗಾಡುತ್ತಿದ್ದ ಹುಡುಗ ಭಾರತೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಮೇಲು, ಅದೇ ಲೋಕಲ್ ಟ್ರೈನ್ ಹಿಡಿದ್ರೆ ಜನರ ರಿಯಾಕ್ಷನ್ ಹೇಗಿರತ್ತೆ, ಇದು ಶಾರ್ದುಲ್ ಠಾಕುರ್ ಅವರ ಸಿಂಪ್ಲಿಸಿಟಿಯ ಉದಾಹರಣೆ. ಭಾರತೀಯ ಕ್ರಿಕೆಟ್ ಟೀಮ್ ನ ಭಾಗವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ರು ಶಾರ್ದುಲ್ ಅವತ್ತು ಮನೆಗೆ ಹೋಗೊಕೆ ಬಳಸಿದ್ದು ಲೋಕಲ್ ಟ್ರೈನ್, ಆ ಸಂದರ್ಭದಲ್ಲಿ ಟ್ರೈನ್ ನಲ್ಲಿದ್ದವರಿಗೆ ಆಶ್ಚರ್ಯದ ಜೊತೆ ಇವರು ನಿಜವಾಗಲು ಶಾರ್ದುಲ್ ಠಾಕುರಾ ಅನ್ನೋ ಅನುಮಾನ ಕಾಡಿತ್ತಂತೆ. ಈ ಬಗ್ಗೆ ಸ್ವತಃ ಶಾರ್ದುಲ್ ಮಾತನಾಡಿದ್ದಾರೆ.

2018ರ ದಕ್ಷಿಣಾ ಆಫ್ರಿಕಾ ಟೂರ್ ನ ಟೆಸ್ಟ್ ಮ್ಯಾಚ್ ನ ಭಾಗವಾಗಿದ್ದ ಶಾರ್ದುಲ್, ಭಾರತಕ್ಕೆ ಮರಳಿ ಬಂದಮೇಲೆ ಮನೆಗೆ ಹೋಗಲು ಬಳಸಿದ್ದು ಮುಂಬೈನ ಲೋಕಲ್ ಟ್ರೈನ್.‌ ಅಂಧೇರಿಯಿಂದ, ಪಾಲ್ಘರ್ ನ ತನ್ನ ಮನೆಗೆ ಲೋಕಲ್ ಟ್ರೈನ್ ನಲ್ಲಿಯೆ ಪ್ರಯಾಣಿಸಿದ್ರು. ಈ ಬಗ್ಗೆ ಮಾತನಾಡಿರೊ ಶಾರ್ದುಲ್, ನಾನು ಟ್ರೈನ್ ನಲ್ಲಿ ಪ್ರಯಾಣಿಸುತ್ತಿದ್ದೆ, ಕಂಪಾರ್ಟ್ ಮೆಂಟ್ ನಲ್ಲಿರೊ ಜನ ನನ್ನ ಗಮನಿಸುತ್ತಿದ್ರು.‌ ನನಗೆ ಜನ ನನ್ನ ನೋಡುತ್ತಿದ್ದಾರೆ, ಗುರುತಿಸುತ್ತಿದ್ದಾರೆ ಎಂದು ತಿಳಿಯಿತು. ನನ್ನ ಜೊತೆ ಪ್ರಯಾಣಿಸುತ್ತಿದ್ದ ಯುವಕರು ಇವನೇನಾ ಶಾರ್ದುಲ್ ಎಂದು ನನ್ನ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಪಡೆದು, ಫೋಟೊ ಚೆಕ್ ಮಾಡಿ ನಾನೇ ಶಾರ್ದುಲ್ ಎಂದು ತಿಳಿದ್ಮೇಲೆ ಸೆಲ್ಫಿ ಕೇಳಿದ್ರು.

ಯುವಕರು ಮತ್ತು ಮಕ್ಕಳ ಗುಂಪೊಂದು ನನ್ನ ಬಳಿ ಸೆಲ್ಫಿ ಕೇಳಿದ್ರು, ಪಾಲ್ಘಾರ್ ಸ್ಟೇಷನ್ ನಲ್ಲಿ ನಾವೆಲ್ಲಾ ಸೆಲ್ಫಿ ಕ್ಲಿಕ್ಕಿಸಿಕೊಂಡೆವು. ಕೆಲವರಂತು ನಾನು ಈ ಹಿಂದೆಯು ಟ್ರೈನ್ ನಲ್ಲಿ ಒಡಾಡುತ್ತಿದ್ದೆ, ಅದನ್ನು ನೆನಪಿಸಿಕೊಂಡು ನಿಮ್ಮನ್ನು ಇಲ್ಲೇ ಈ ಹಿಂದೆ ನೋಡಿದ್ದೆವು ಎಂದರು, ಎಂದು ಶಾರ್ದುಲ್ ಠಾಕುರ್ ತಮ್ಮ ಲೋಕಲ್ ಟ್ರೈನ್ ಇತಿಹಾಸವನ್ನ ಮೆಲುಕು ಹಾಕಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲು ಶಾರ್ದುಲ್ ಉತ್ತಮ‌ ಪ್ರದರ್ಶನ ನೀಡುತ್ತಾ ಭಾರತೀಯರ ಮನಸ್ಸನ್ನ ಗೆದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...