alex Certify ಇದು ಬ್ರೈನ್​ ಹ್ಯಾಕ್​; ಫನ್ನಿಯಾಗಿದೆ ಈ ಸೈನ್ಸ್‌ ಟ್ರಿಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಬ್ರೈನ್​ ಹ್ಯಾಕ್​; ಫನ್ನಿಯಾಗಿದೆ ಈ ಸೈನ್ಸ್‌ ಟ್ರಿಕ್….!

ಸಾಮಾಜಿಕ ಜಾಲತಾಣಗಳು ಹೊಸ ಹೊಸ ಪ್ರಯೋಗಗಳ ಪ್ರಚಾರಕ್ಕೆ ವೇದಿಕೆಯೂ ಹೌದು ಎಂಬಂತಾಗಿದೆ. ಜನಪ್ರಿಯ ಟ್ವಿಟರ್​ ಬಳಕೆದಾರ ತನ್ಸು ಯೆಗೆನ್​ ಅಪ್​ಲೋಡ್​ ಮಾಡಿದ ಇತ್ತೀಚಿನ ವಿಡಿಯೊ ನೆಟ್ಟಿಗರ ಗಮನ ಸೆಳೆದು ಹೌಹಾರುವಂತೆ ಮಾಡಿದೆ, ಅದು ಬ್ರೈನ್​ ಹ್ಯಾಕ್​ ಮತ್ತು ಸೈನ್ಸ್​ ಫನ್​ ಎಂದು ಹೇಳಬಹುದು.

ವಿಡಿಯೊದಲ್ಲಿ ಬಿಳಿ ಕೋಟ್​ ಧರಿಸಿದ ವ್ಯಕ್ತಿ ನಿಧಾನವಾಗಿ ಪ್ರಯೋಗಕ್ಕೊಳಗಾದ ವ್ಯಕ್ತಿಯ ಮನಸ್ಸನ್ನು ಮೋಸಗೊಳಿಸುವುದನ್ನು ತೋರಿಸುತ್ತದೆ.

ಪ್ರಯೋಗಕ್ಕೊಳಗಾದ ವ್ಯಕ್ತಿಯ ನಿಜವಾದ ಕೈಯನ್ನು ಕಾಣದಂತೆ ಇರಿಸಲು ಆತ ಮೊದಲು ಬೋರ್ಡ್​ ಅನ್ನು ಬಳಸುತ್ತಾನೆ. ಬಟ್ಟೆಯಿಂದ ಮುಚ್ಚುತ್ತಾನೆ. ಕೋಟ್​ ಹಾಕಿರುವ ವ್ಯಕ್ತಿ ನಂತರ ನಿಜವಾದ ಮತ್ತು ನಕಲಿ ಎರಡೂ ಕೈಗಳನ್ನು ಸ್ಪರ್ಶಿಸುವ ಮೂಲಕ ಪ್ರಯೋಗ ಪ್ರಾರಂಭಿಸುತ್ತಾನೆ.

ಸ್ವಲ್ಪ ಸಮಯದ ನಂತರ, ಅವನು ಪ್ರಯೋಗಕ್ಕೊಳಗಾದ ವ್ಯಕ್ತಿಯ ನಿಜವಾದ ಕೈ ಮುಟ್ಟುವುದನ್ನೇ ನಿಲ್ಲಿಸುತ್ತಾನೆ. ನಕಲಿ ಕೈಯನ್ನು ಮಾತ್ರ ಮುಟ್ಟುತ್ತಾನೆ. ಮೆದುಳನ್ನು ಹ್ಯಾಕ್​ ಮಾಡಿರುವುದು ಆಗ ಸ್ಪಷ್ಟವಾಗಿ ಗೋಚರಿಸುತ್ತದೆ. ನಕಲಿ ಕೈಯನ್ನು ಹೊಡೆಯಲು ಸುತ್ತಿಗೆ ಬಳಸಿದಾಗ, ಪ್ರಯೋಗಕ್ಕೊಳಗಾದ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ತನ್ನ ನೈಜ ಕೈಯಲ್ಲಿ ನೋವು ಅನುಭವಿಸುತ್ತಾರೆ. ವ್ಯಕ್ತಿಯ ಕಣ್ಣುಗಳನ್ನು ಬಳಸಿಕೊಂಡು ಮೆದುಳನ್ನು ಗೊಂದಲಗೊಳಿಸುವುದರ ಮೂಲಕ ಈ ಟ್ರಿಕ್​ ಅನ್ನು ನಡೆಸಲಾಗುತ್ತದೆ.

ಈ ತಮಾಷೆ ಮತ್ತು ಆಸಕ್ತಿದಾಯಕ ವಿಡಿಯೊ ನೋಡಿ ನೆಟ್ಟಿಗರು ಸಾಕಷ್ಟು ಕಾಮೆಂಟ್​ ಮಾಡಿದ್ದಾರೆ. ಇದೇನು ಮಾಯೆಯೇ? ಎಂದು ಕೂಡ ಪ್ರಶ್ನಿಸಿದ್ದಾರೆ.

— Tansu YEĞEN (@TansuYegen) July 9, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...