alex Certify ‌ʼವಾಟ್ಸಾಪ್ʼ ಅರ್ಕೈವ್​ ಚಾಟ್​​ ಆಯ್ಕೆ ಕುರಿತಂತೆ ಬಂತು ಬಳಕೆದಾರರ ಬಹುಬೇಡಿಕೆಯ ಈ ಹೊಸ ವೈಶಿಷ್ಟ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼವಾಟ್ಸಾಪ್ʼ ಅರ್ಕೈವ್​ ಚಾಟ್​​ ಆಯ್ಕೆ ಕುರಿತಂತೆ ಬಂತು ಬಳಕೆದಾರರ ಬಹುಬೇಡಿಕೆಯ ಈ ಹೊಸ ವೈಶಿಷ್ಟ್ಯ..!

ವಾಟ್ಸಾಪ್​ನಲ್ಲಿ ಯಾರಾದರೂ ಕಳುಹಿಸಿದ ಸಂದೇಶವನ್ನು ನಮಗೆ ರೀಡ್​ ಮಾಡಲು ಇಷ್ಟವಿಲ್ಲದೇ ಹೋದಲ್ಲಿ ಅಥವಾ ವಾಟ್ಸಾಪ್​ ಪರದೆಯ ಮೇಲೆ ಅವರ ಚಾಟ್​​ ಕಾಣಿಸಬಾರದು ಎಂದಾದಲ್ಲಿ ಅರ್ಕೈವ್​​ ಚಾಟ್​ ಎಂಬ ಆಯ್ಕೆಯನ್ನು ಬಳಸಿಕೊಳ್ತೇವೆ. ಈ ಅರ್ಕೈವ್​ ಚಾಟ್​ ವಿಭಾಗದಲ್ಲಿ ವಾಟ್ಸಾಪ್​ ಇದೀಗ ಬಹುಬೇಡಿಕೆಯ ಸುಧಾರಣೆಯೊಂದನ್ನು ತಂದಿದೆ.

ಹಿಂದೆಲ್ಲ ನೀವು ಯಾವುದೇ ಚಾಟ್​ನ್ನು ಅರ್ಕೈವ್​ ಮಾಡಿದ ಬಳಿಕ ಆ ಕ್ಯಾಂಟಾಕ್ಟ್​ನಿಂದ ಹೊಸ ಸಂದೇಶ ಬಂದಲ್ಲಿ ಅರ್ಕೈವ್​ ಮಾಡಿದ ಚಾಟ್​ ಪುನಃ ವಾಟ್ಸಾಪ್​ ಪರದೆಯ ಮೇಲೆ ಕಾಣಿಸಿಕೊಳ್ತಿತ್ತು. ಆದರೆ ಇನ್ಮೇಲೆ ಹಾಗಾಗೋದಿಲ್ಲ. ಅರ್ಕೈವ್​ ಮಾಡಲಾದ ಚಾಟ್​ಗಳಲ್ಲಿ ಹೊಸ ಸಂದೇಶ ಬಂದರೂ ಸಹ ಅದು ಅನ್​ಅರ್ಕೈವ್​ ಆಗದೇ ಅರ್ಕೈವ್​ ಫೋಲ್ಡರ್​ನಲ್ಲಿಯೇ ಇರಲಿದೆ. ಅನೇಕ ಬಳಕೆದಾರರು ಈ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಈ ಅಪ್​ಡೇಟ್​ ಬಿಡುಗಡೆ ಮಾಡಿದ್ದೇವೆ ಎಂದು ಫೇಸ್​ಬುಕ್​ ಮಾಲಿಕತ್ವದ ಕಂಪನಿ ಹೇಳಿದೆ.

ಮೊದಲು ಈ ಹೊಸ ಸೌಲಭ್ಯವನ್ನು ಐಫೋನ್​ ಬಳಕೆದಾರರಿಗೆ ಮಾತ್ರ ನೀಡಲಾಗಿತ್ತು. ಆದ್ರೀಗ ಆಂಡ್ರಾಯ್ಡ್​ ಬಳಕೆದಾರರೂ ಕೂಡ ಈ ಸೌಲಭ್ಯದ ಲಾಭ ಪಡೆಯಬಹುದಾಗಿದೆ. ಈ ಮೂಲಕ ಅರ್ಕೈವ್​ ಫೋಲ್ಡರ್​ನಲ್ಲಿರುವ ಚಾಟ್​ಗಳನ್ನು ನೀವು ಬಯಸಿದಲ್ಲಿ ಮಾತ್ರ ಪರದೆ ಮೇಲೆ ಕಾಣಿಸುವಂತೆ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...