alex Certify BIG NEWS:‌ ನವೆಂಬರ್ ನಲ್ಲಿ ಬರೋಬ್ಬರಿ 71 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್; ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ನವೆಂಬರ್ ನಲ್ಲಿ ಬರೋಬ್ಬರಿ 71 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್; ಇದರ ಹಿಂದಿದೆ ಈ ಕಾರಣ

ಮೆಟಾ ಮಾಲೀಕತ್ವದ ವಾಟ್ಸಾಪ್ 2023 ರ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಿಯಮ ಪಾಲಿಸದ 71 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಐಟಿ ನಿಯಮಗಳು 2021 ರ ಅಡಿಯಲ್ಲಿ ಜನವರಿ 1 ರಂದು ಪ್ರಕಟಿಸಿರುವ ಭಾರತದ ಮಾಸಿಕ ವರದಿಯ ಪ್ರಕಾರ ವಾಟ್ಸಾಪ್ ನವೆಂಬರ್ 1 ರಿಂದ 30 ರ ನಡುವೆ ಒಂದು ತಿಂಗಳ ಅವಧಿಯಲ್ಲಿ 71,96,000 ಖಾತೆಗಳನ್ನು ನಿಷೇಧಿಸಿದೆ. ದೂರುದಾರರು ಈ ಖಾತೆಗಳನ್ನು ವರದಿ ಮಾಡುವ ಮೊದಲು ಕಂಪನಿಯು 19,54,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಿತ್ತು.

ವಾಟ್ಸಾಪ್ ಭಾರತೀಯ ಬಳಕೆದಾರರನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸುತ್ತದೆ. ಒಂದೇ ತಿಂಗಳಲ್ಲಿ ವಾಟ್ಸಾಪ್ 8,841 ದೂರುಗಳನ್ನು ಸ್ವೀಕರಿಸಿದೆ . ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ (GAC) ಲೂ ವಾಟ್ಸಾಪ್ ದೂರುಗಳನ್ನು ಸ್ವೀಕರಿಸಿದ್ದು, ಅದರ ವರದಿ ಆಧಾರದ ಮೇಲೂ ಕ್ರಮ ಕೈಗೊಂಡಿದೆ. ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರತದ ನಾಗರಿಕರು ವ್ಯಕ್ತಪಡಿಸಿದ ಕಳವಳಗಳನ್ನು ಪರಿಹರಿಸಲು GAC ಅನ್ನು ಭಾರತ ಸರ್ಕಾರ ರಚಿಸಿದೆ.

ದೂರುದಾರರ ವರದಿಗಳಷ್ಟೇ ಅಲ್ಲದೇ ವಾಟ್ಸಾಪ್ ತನ್ನ ಸ್ವಂತ ಪರಿಶೀಲನೆಯಿಂದಲೂ ಖಾತೆಗಳನ್ನು ನಿಷೇಧಿಸುವ ಕ್ರಮಗಳನ್ನು ಕೈಗೊಂಡಿದೆ.

ಹಾನಿಕಾರಕ ನಡವಳಿಕೆಯನ್ನು ತಡೆಗಟ್ಟಲು ಮತ್ತು ವಾಟ್ಸಾಪ್ ದುರುಪಯೋಗವನ್ನು ನಿಭಾಯಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅವುಗಳಲ್ಲಿ ಪ್ರಮುಖವಾಗಿ ನೋಂದಣಿ ಸಮಯದಲ್ಲಿ, ಸಂದೇಶ ಕಳುಹಿಸುವಾಗ ಮತ್ತು ನಕಾರಾತ್ಮಕ ಪ್ರತಿಕ್ರಿಯೆ ತಡೆಗೆ ಮೂರು ವಿಭಿನ್ನ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಬಳಕೆದಾರರು ಖಾತೆಯನ್ನು ವರದಿ ಮಾಡಿದಾಗ, ವಿಶ್ಲೇಷಕರ ತಂಡವು ಖಾತೆಯನ್ನು ಶಾಶ್ವತವಾಗಿ ನಿಷೇಧಿಸುವಂತಹ ಕಠಿಣ ಕ್ರಮದ ಅಗತ್ಯವಿದೆಯೇ ಎಂದು ಮೌಲ್ಯಮಾಪನ ಮಾಡುತ್ತದೆ.

ವರ್ಷವಿಡೀ ಗೌಪ್ಯತೆ ಮತ್ತು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ವಾಟ್ಸಾಪ್ ಹಲವಾರು ಭದ್ರತಾ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಕಂಪನಿಯು ಪ್ರಸ್ತುತ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಮ್ಯೂಟ್ ಅನ್ ನೋನ್ ನಂಬರ್ ಮತ್ತು ಚಾಟ್ ಲಾಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ವಾಟ್ಸಾಪ್ ಅನ್ನು ಬಳಕೆದಾರರ ಖಾಸಗಿತನ ಮತ್ತು ಸುರಕ್ಷಿತೆಯನ್ನು ರಕ್ಷಿಸುವ ಆದ್ಯತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...