alex Certify ‘ಸುಪ್ರೀಂ’ ನಿವೃತ್ತ ನ್ಯಾಯಮೂರ್ತಿಗಳಿಗೆ ಸಿಗುತ್ತೆ ಈ ಎಲ್ಲ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸುಪ್ರೀಂ’ ನಿವೃತ್ತ ನ್ಯಾಯಮೂರ್ತಿಗಳಿಗೆ ಸಿಗುತ್ತೆ ಈ ಎಲ್ಲ ಸೌಲಭ್ಯ

ಭಾರತದ ಮುಖ್ಯ ನ್ಯಾಯಮರ್ತಿ ಸ್ಥಾನದಲ್ಲಿದ್ದವರು ಅಧಿಕಾರದಿಂದ ನಿರ್ಗಮಿಸಿದ ನಂತರ ಏನೆಲ್ಲ ಸೌಲಭ್ಯ ಪಡೆಯುತ್ತಾರೆಂಬ ಕುತೂಹಲ ಅನೇಕರಲ್ಲಿದೆ.

ಆ ಸ್ಥಾನದಲ್ಲಿದ್ದು ನಿವೃತ್ತಿಯಾದ ದಿನದಿಂದ ಜೀವಿತಾವಧಿಯವರೆಗೂ ಗೃಹ ಸಹಾಯಕ, ಚಾಲಕ ಮತ್ತು ಆಪ್ತ ಕಾರ್ಯದರ್ಶಿ ಸೇವೆ ಪಡೆಯುವ ಅವಕಾಶ ಹೊಂದಿದ್ದು, ಶುಕ್ರವಾರ ಹೊರಡಿಸಿದ ಹೊಸ ಅಧಿಸೂಚನೆಯಲ್ಲಿ ಈ ಅಂಶವಿದೆ.

ಕೇಂದ್ರ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯು, ನಿವೃತ್ತ ಸಿಜೆಐಗಳು ಮತ್ತು ಉನ್ನತ ನ್ಯಾಯಾಲಯದ ನ್ಯಾಯಾಧೀಶರಿಗೆ ನಿವೃತ್ತಿಯ ನಂತರದ ಸೌಲಭ್ಯಗಳನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್​ ನ್ಯಾಯಾಧೀಶರ ನಿಯಮಗಳನ್ನು ಮತ್ತೊಮ್ಮೆ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದೆ.

ಈ ಹಿಂದೆ ಆಗಸ್ಟ್​ 23ರಂದು ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು. ಹೊಸ ತಿದ್ದುಪಡಿ ಮಾಡಲಾದ ನಿಯಮಗಳ ಪ್ರಯೋಜನಗಳನ್ನು ಎಲ್ಲಾ ಮಾಜಿ ಸಿಜೆಐಗಳು ಮತ್ತು ನಿವೃತ್ತ ಸುಪ್ರೀಂ ಕೋರ್ಟ್​ ನ್ಯಾಯಾಧೀಶರಿಗೆ ವಿಸ್ತರಿಸಲಾಗುತ್ತಿದೆ.

ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳ ಪ್ರಕಾರ, ನಿವೃತ್ತ ಮುಖ್ಯ ನ್ಯಾಯಾಧೀಶರು ನಿವೃತ್ತಿಯ ದಿನಾಂಕದಿಂದ ಐದು ವರ್ಷಗಳ ಅವಧಿಗೆ ದಿನದ 24 ಗಂಟೆ ವೈಯಕ್ತಿಕ ಭದ್ರತಾ ಸಿಬ್ಬಂದಿಯ ಜೊತೆಗೆ ಅವರ ನಿವಾಸದಲ್ಲಿ ದಿನದ 24 ಗಂಟೆಗಳ ಕಾಲ ಭದ್ರತೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ನಿವೃತ್ತ ಸುಪ್ರೀಂ ಕೋರ್ಟ್​ ನ್ಯಾಯಾಧೀಶರು ತಮ್ಮ ನಿವಾಸದಲ್ಲಿ ಭದ್ರತಾ ಸಿಬ್ಬಂದಿ ಸೇವೆ ಪಡೆಯಬಹುದು. ಜೊತೆಗೆ ನಿವೃತ್ತಿಯ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ 24 ಗಂಟೆಗಳ ವೈಯಕ್ತಿಕ ಭದ್ರತಾ ಸಿಬ್ಬಂದಿ ಸೇವೆಗೂ ಅರ್ಹರಾಗಿರುತ್ತಾರೆ.

ನಿವೃತ್ತ ಸಿಜೆಐ ಅಥವಾ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಬೆದರಿಕೆ ಆಧಾರದ ಮೇಲೆ ಈಗಾಗಲೇ ಉನ್ನತ ದರ್ಜೆಯ‌ ಭದ್ರತೆ ಒದಗಿಸಿದ್ದರೆ, ಈಗಾಗಲೇ ಒದಗಿಸಿದ ಉನ್ನತ ದರ್ಜೆಯ ಭದ್ರತೆಯು ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ನಿವೃತ್ತ ಸಿಜೆಐ ನಿವೃತ್ತಿಯ ದಿನಾಂಕದಿಂದ ಆರು ತಿಂಗಳ ಅವಧಿಗೆ ದೆಹಲಿಯಲ್ಲಿ (ನಿಯೋಜಿತ ಅಧಿಕೃತ ನಿವಾಸವನ್ನು ಹೊರತುಪಡಿಸಿ) ಬಾಡಿಗೆ- ಮುಕ್ತ ಟೈಪ್​&7 ವಸತಿಗೆ ಅರ್ಹರಾಗಿರುತ್ತಾರೆ. ಮಾಜಿ ಕೇಂದ್ರ ಸಚಿವರಾಗಿದ್ದ ಹಾಲಿ ಸಂಸದರಿಗೆ ಸಾಮಾನ್ಯವಾಗಿ ಟೈಪ್​&7 ಮಾದರಿಯ ವಸತಿ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈ ತಿಂಗಳ ಆರಂಭದಲ್ಲಿ ನಿವೃತ್ತ ಸಿಜೆಐಗಳಿಗೆ ವಸತಿ ಸೌಲಭ್ಯವನ್ನು ವಿಸ್ತರಿಸಲಾಯಿತು.
ಈ ತಿಂಗಳ ಆರಂಭದಲ್ಲಿ ಘೋಷಿಸಲಾದ ನಿಯಮದ ಪ್ರಕಾರ ನಿವೃತ್ತ ಸಿಜೆಐ ಮತ್ತು ನಿವೃತ್ತ ಸುಪ್ರೀಂ ಕೋರ್ಟ್​ ನ್ಯಾಯಾಧೀಶರಿಗೆ ವಿಮಾನ ನಿಲ್ದಾಣಗಳಲ್ಲಿನ ಸೆರಮೋನಿಯಲ್​ ಲಾಂಜ್​ ಸೌಲಭ್ಯವೂ ಮುಂದುವರಿಯುತ್ತದೆ.

ಹೈಕೋರ್ಟ್ ನ್ಯಾಯಾಧೀಶರ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಹೈಕೋರ್ಟ್​ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ವಿಐಪಿ ಲಾಂಜ್​ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನಿವೃತ್ತ ಸಿಜೆಐ ಅಥವಾ ನಿವೃತ್ತ ಸುಪ್ರೀಂ ಕೋರ್ಟ್​ ನ್ಯಾಯಾಧೀಶರ ಮನೆಗೆ ಉಚಿತ ದೂರವಾಣಿ, ಮೊಬೈಲ್​ ಫೋನ್​ ಅಥವಾ ಬ್ರಾಡ್​ಬ್ಯಾಂಡ್​, ಡೇಟಾ ಕಾರ್ಡ್​ನ ದೂರವಾಣಿ ಕರೆ ಶುಲ್ಕಗಳನ್ನು ಮರುಪಾವತಿ ಪಡೆಯಲು ಅರ್ಹರಾಗಿರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...