alex Certify Big Shocking: ಪತ್ನಿ ಕೆಲಸಕ್ಕೆ ಹೋಗುತ್ತಾಳೆಂದು ಆಕೆಯ ಕೈಯನ್ನೇ ಕಡಿದ ಪಾಪಿ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big Shocking: ಪತ್ನಿ ಕೆಲಸಕ್ಕೆ ಹೋಗುತ್ತಾಳೆಂದು ಆಕೆಯ ಕೈಯನ್ನೇ ಕಡಿದ ಪಾಪಿ ಪತಿ

ಪಶ್ಚಿಮ ಬಂಗಾಳದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ಪತ್ನಿ ಕೆಲಸಕ್ಕೆ ಹೋಗುವುದನ್ನು ತಡೆಯಬೇಕೆಂಬ ಕಾರಣಕ್ಕೆ ಪಾಪಿ ಪತಿ ಆಕೆಯ ಕೈಯನ್ನೇ ಕತ್ತರಿಸಿದ್ದಾನೆ. ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ ಜಿಲ್ಲೆಯ ಕೇತುಗ್ರಾಮದಲ್ಲಿ ಸೋಮವಾರದಂದು ನಡೆದಿದೆ.

ಘಟನೆಯ ವಿವರ: ಕೇತುಗ್ರಾಮದ ಶೇರ್‌ ಮೊಹಮ್ಮದ್‌ ನ ಪತ್ನಿ ರೇಣು ಖಾತೂನ್‌ ಸರ್ಸಿಂಗ್‌ ತರಬೇತಿ ಪಡೆದಿದ್ದು, ಖಾಸಗಿ ನರ್ಸಿಂಗ್‌ ಹೋಂ ಒಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಆಕೆಗೆ ಸರ್ಕಾರಿ ನರ್ಸ್ ಉದ್ಯೋಗ‌ ಸಿಕ್ಕಿದ್ದು, ಇದರಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಮೊಹಮ್ಮದ್‌ ಗೆ ಹೊಟ್ಟೆಯೂರಿ ಶುರುವಾಗಿತ್ತು.

ಈ ಮೊದಲೇ ಪತ್ನಿ ಕೆಲಸಕ್ಕೆ ಹೋಗುವುದಕ್ಕೆ ಆಕ್ಷೇಪಿಸುತ್ತಿದ್ದ ಶೇರ್‌ ಮೊಹಮ್ಮದ್‌, ಪತ್ನಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡರೆ ತನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಹುದೆಂಬ ಆತಂಕ ಹೊಂದಿದ್ದ. ಹೀಗಾಗಿ ಸೋಮವಾರದಂದು ಆಕೆಯೊಂದಿಗೆ ಜಗಳ ತೆಗೆದ ಪತಿ ಆಕೆಯ ಕೈ ಕತ್ತರಿಸಿದ್ದಾನೆ. ಬಳಿಕ ಆತನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...