alex Certify ಮೊದಲ ಮಗು ನಿರೀಕ್ಷೆಯಲ್ಲಿ ಸಲಿಂಗಕಾಮಿ ದಂಪತಿ: ಹಿಂದೂ ಪದ್ಧತಿಯಂತೆ ವಿವಾಹವಾಗಿ ವೈರಲ್ ಆಗಿದ್ದ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಮಗು ನಿರೀಕ್ಷೆಯಲ್ಲಿ ಸಲಿಂಗಕಾಮಿ ದಂಪತಿ: ಹಿಂದೂ ಪದ್ಧತಿಯಂತೆ ವಿವಾಹವಾಗಿ ವೈರಲ್ ಆಗಿದ್ದ ಜೋಡಿ

2019ರಲ್ಲಿ ಇಂಟರ್‌ನೆಟ್‌ನಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಎಲ್ಲರೂ ದಂಗಾಗಿ ಹೋಗಿದ್ದರು. ಕಾರಣ ಸಲಿಂಗಕಾಮಿ ಜೋಡಿ ಹಿಂದೂ ಪದ್ಧತಿಯಂತೆ ವಿಧಿವತ್ತಾಗಿ ಮದುವೆಯಾಗಿದ್ದರು. ಆ ವಿಡಿಯೋವನ್ನ ತಮ್ಮ ಸೋಶಿಯಲ್ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈಗ ಅದೇ ಸಲಿಂಗಕಾಮಿ ದಂಪತಿ ಅಮಿತ್ ಮತ್ತು ಆದಿತ್ಯ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅಮಿತ್ ಮತ್ತು ಆದಿತ್ಯ ಇವರಿಬ್ಬರು ತಮ್ಮ ಬಾಡಿಗೆ ತಾಯಿಯ ಮೂಲಕ, ಪಾಲಕರಾಗುವ ಆಸೆಯನ್ನ ಹೊಂದಿದ್ದಾರೆ. ಅಂಡಾಣು ದಾನಿ ಮತ್ತು ಗರ್ಭಾವಸ್ಥೆಯ ವಾಹಕಗಳ ನಡುವಿನ ವ್ಯತ್ಯಾಸವನ್ನ ಅರ್ಥ ಮಾಡಿಕೊಂಡು ಜೈವಿಕ ಮಗುವನ್ನ ಪಡೆದುಕೊಳ್ಳಲಿದ್ದಾರೆ. ಈ ಒಂದು ಪ್ರಕ್ರಿಯೆ ತುಂಬಾ ದುಬಾರಿಯಾಗಿದ್ದು, ಆದರು ತಮಗೊಂದು ಮಗು ಬೇಕು ಅನ್ನೊ ಆಸೆಯನ್ನ ಈ ಮೂಲಕ ಈಡೇರಿಸಿಕೊಳ್ಳಲಿದ್ದಾರೆ.

ಸಾಮಾನ್ಯವಾಗಿ ಸಲಿಂಗಕಾಮಿ ಜೋಡಿಗಳು ಮಗು ಹೊಂದುವುದು ಅಸಾಧ್ಯ. ಆದರೆ ಈಗ ಸಲಿಂಗ ದಂಪತಿಗಳಾಗಿದ್ದರೂ ಪರವಾಗಿಲ್ಲ. ನೀವು ನಿಮ್ಮ ಜೀವನವನ್ನು ನಡೆಸಬಹುದು ಎಂದು ತಮ್ಮಂತೆ ಇರೋ ಬೇರೆ ಬೇರೆ ಜೋಡಿಗಳಿಗೆ ಈ ಸಂದೇಶವನ್ನ ಕೊಟ್ಟಿದ್ದಾರೆ.

ಈ ವಿಚಾರ ಕೇವಲ 5-6 ಜನರಿಗೆ ಮಾತ್ರ ಗೊತ್ತಿದೆ. ಈಗಾಗಲೇ ಅನೇಕರು ಈ ವಿಷಯ ತಿಳಿದಾಕ್ಷಣ ಅವರು ಕೂಡಾ ಮಗುವನ್ನ ಹೊಂದುವ ಕನಸನ್ನ ಕಾಣುತ್ತಿದ್ದಾರೆ. ಆಗಲೇ ಒಂದು ಕುಟುಂಬ ಅಂತ ಗುರುತಿಸಿಕೊಳ್ಳುತ್ತೆ. ಕೆಲವರು ಈ ವಿಷಯವನ್ನ ಮುಚ್ಚಿಡಲು ಇಚ್ಛಿಸುತ್ತಾರೆ. ಆದ್ದರಿಂದ ಕಾಯಿರಿ, ತಾಳ್ಮೆಯಿಂದಿರಿ ಎಂದು ಈ ದಂಪತಿಗಳು ಉಳಿದ ಸಲಿಂಗ ಕಾಮಿಗಳ ಜೋಡಿಗೆ ಈ ಸಂದೇಶವನ್ನ ಕೊಟ್ಟಿದ್ದಾರೆ.

ವಿಚಾರ ಏನಂದ್ರೆ ಮದುವೆ ಮತ್ತು ಮಕ್ಕಳನ್ನು ಹೊಂದುವ ಪರಿಕಲ್ಪನೆಯು ಇದೆಲ್ಲವನ್ನೂ ನಾವು ಮುಂಚೆಯಿಂದಲೂ, ನಮ್ಮ-ನಮ್ಮ ಕುಟುಂಬದವರೊಂದಿಗೆ ಚರ್ಚೆ ಮಾಡಿದ್ದೇವೆ. ಈ ಚರ್ಚೆಗಳು ನಮ್ಮ ಸಂಬಂಧವನ್ನ ಇನ್ನಷ್ಟು ಗಟ್ಟಿ ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಆದಿತ್ಯ ಹೇಳುತ್ತಾರೆ.

ಸದ್ಯಕ್ಕೆ ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಆದಿತ್ಯ ಮತ್ತು ಅಮಿತ್ ಈ ಖುಷಿಯ ವಿಚಾರವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ನನಗೆ ಒಂದು ಕನಸಿತ್ತು. ಅದು ನನಸಾಗುತ್ತಿದೆ. ಈಗ ನಾನು ಅದನ್ನು ಪ್ರೀತಿಯಿಂದ ಪ್ರೀತಿಸುತ್ತೇನೆ, ಜೊತೆಗೆ ಅದನ್ನ ಪ್ರೀತಿಯಿಂದಲೇ ಹಿಡಿದಿಟ್ಟುಕೊಳ್ಳುತ್ತೇನೆ. ನನ್ನ ನಿನ್ನ @amit aatma ಸೃಷ್ಟಿ ಮಾಡಿದ ಈ ವಿಶ್ವಕ್ಕೂ ನಾನು ಧನ್ಯವಾದ ಹೇಳುತ್ತೇನೆ ಎಂದು ಇವರು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...