alex Certify ಕಲ್ಯಾಣ ಮಂಟಪದಲ್ಲಿದ್ದರೂ ವರ್ಕ್​ ಫ್ರಮ್​ ಹೋಮ್​ನಲ್ಲೇ ವರ ಬ್ಯುಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಯಾಣ ಮಂಟಪದಲ್ಲಿದ್ದರೂ ವರ್ಕ್​ ಫ್ರಮ್​ ಹೋಮ್​ನಲ್ಲೇ ವರ ಬ್ಯುಸಿ

2020ರವರೆಗೂ ಅನೇಕರಿಗೆ ವರ್ಕ್​ ಫ್ರಾಮ್​ ಹೋಮ್ ಅನ್ನೋದು ಒಂದು ಕನಸೇ ಆಗಿತ್ತು. ಯಾರು ಕೂಡ ತಾವು ಇನ್ಮೇಲೆ ಈ ರೀತಿ ಮನೆಯಲ್ಲೇ ವರ್ಷಗಟ್ಟಲೇ ಕೂತು ಕಚೇರಿ ಕೆಲಸ ಮಾಡುತ್ತೇವೆ ಎಂದು ಕನಸಲ್ಲೂ ಭಾವಿಸಿರಲಿಲ್ಲ. ಈಗಂತೂ ವರ್ಕ್​ ಫ್ರಮ್ ಹೋಮ್​ ಅನ್ನೋದು ಎಲ್ಲರ ಮನೆಯಲ್ಲೂ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ.

ಈ ವರ್ಕ್ ಫ್ರಮ್​ ಹೋಮ್​ ಅನ್ನೋದು ಯಾವ ರೀತಿಯಲ್ಲಿ ತಳವಾಗಿ ಬೇರೂರಿದೆ ಅಂದರೆ ಮದುವೆ ಮನೆಯವರೆಗೂ ವ್ಯಾಪಿಸಿಬಿಟ್ಟಿದೆ.

ನಿಮ್ಮದೇ ಮದುವೆ ಕಾರ್ಯಕ್ರಮ ಇದ್ದಾಗಲೂ ನಿಮಗೆ ಕಲ್ಯಾಣ ಮಂಟಪದಲ್ಲೇ ಕಚೇರಿ ಮೀಟಿಂಗ್​ಗೆ ಹಾಜರಾಗಬೇಕಾದ ಅನಿವಾರ್ಯತೆ ಬಂದರೆ ಹೇಗಾಗಬೇಡ ಹೇಳಿ.

ಆಶ್ಚರ್ಯಕರ ಎಂಬಂತೆ ಇಂತದ್ದೊಂದು ಘಟನೆಗೂ ಸೋಶಿಯಲ್​ ಮೀಡಿಯಾ ಸಾಕ್ಷಿಯಾಗಿದೆ. ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾಗಿರುವ ವಿಡಿಯೋದಲ್ಲಿ ಕಲ್ಯಾಣ ಮಂಟಪದಲ್ಲಿದ್ದ ವರ ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ವೇಳೆಯೇ ಲ್ಯಾಪ್​ಟಾಪ್​ನ್ನು ಹಿಡಿದುಕೊಂಡು ಕಚೇರಿ ಕೆಲಸ ಮಾಡ್ತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನ ನೋಡಿ ವಧು ನಗುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

https://www.instagram.com/reel/CRqMZtLHdrQ/?utm_source=ig_embed&ig_rid=a39ddefd-6cb0-4fe1-b450-f8a9d398d97c

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...