alex Certify ಆಯಾಸ ದೂರ ಮಾಡುತ್ತೆ ಕರ್ಬೂಜ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯಾಸ ದೂರ ಮಾಡುತ್ತೆ ಕರ್ಬೂಜ ಹಣ್ಣು

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು ಆಯಾಸ, ಸುಸ್ತು ನಿವಾರಿಸುತ್ತದೆ.

ಆಟ ಆಡಿ ಬರುವ ಮಕ್ಕಳಿಗೆ ಈ ಹಣ್ಣಿನ ಪಾನಕವನ್ನು ಕೊಡಬಹುದು. ಮೂಗಿಗೆ ಹಿತವೆನಿಸುವ ಪರಿಮಳ, ನಾಲಿಗೆಗೆ ಹಿಡಿಸುವ ರುಚಿ, ದಾಹ-ದಣಿವು ತಣಿಸುವ ಶಕ್ತಿ ಈ ಹಣ್ಣಿಗಿದೆ. ಅಂದ ಹಾಗೆ ಕರ್ಬೂಜ ಹಣ್ಣು ತಿನ್ನುವುದರಿಂದ ಇನ್ನೇನು ಪ್ರಯೋಜನವಿದೆ ತಿಳಿಯಿರಿ.

 * ಕಣ್ಣಿನ ಶಕ್ತಿಯನ್ನು ಹೆಚ್ಚಿಸಲು ಅವಶ್ಯವಾದ ವಿಟಮಿನ್ ಎ, ಬೀಟಾ ಕೆರೋಟಿನ್ ಕರ್ಬೂಜ ಹಣ್ಣಿನಲ್ಲಿದ್ದು, ಕಣ್ಣಿನ ಪೊರೆ ಸಮಸ್ಯೆ ಹೆಚ್ಚಾಗುವುದನ್ನು ತಡೆಯುತ್ತದೆ.

* ಕರ್ಬೂಜ ಹಣ್ಣಿನಲ್ಲಿರುವ ಅಧಿಕ ಪೊಟಾಶಿಯಂ ತೂಕ ಕರಗಿಸಲು ಸಹಾಯ ಮಾಡುತ್ತದೆ. ಹಾಗೆ ಅತಿ ಕಡಿಮೆ ಕೊಬ್ಬಿನಂಶ ಒಳ್ಳೆಯ ಕಾರ್ಬೋಹೈಡ್ರೇಟ್ ಇದೆ.

* ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಸರ್ ಗೂ ಇದು ಒಳ್ಳೆಯದು.

* ನಿದ್ರಾ ಸಂಬಂಧಿತ ತೊಂದರೆಗಳನ್ನು ದೂರ ಮಾಡುತ್ತದೆ.

* ಅಷ್ಟೇ ಅಲ್ಲದೆ ರಕ್ತ ಶುದ್ಧೀಕರಿಸುವ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚುವಂತೆ ಮಾಡುತ್ತದೆ.

* ಹೃದಯ ಸಂಬಂಧಿ ಕಾಯಿಲೆಗಳಿಗೂ ಪ್ರಯೋಜನಕಾರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...