alex Certify ಮರದ ರೆಂಬೆಗಳ ನಡುವೆ ಸಿಲುಕಿದ್ದ ಹಸುವಿನ ರಕ್ಷಣೆ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರದ ರೆಂಬೆಗಳ ನಡುವೆ ಸಿಲುಕಿದ್ದ ಹಸುವಿನ ರಕ್ಷಣೆ: ವಿಡಿಯೋ ವೈರಲ್​

ಹರಿಕೇನ್​ ಇಡಾ ಚಂಡಮಾರುತವು ಲುಸಿಯಾನಾ ಹಾಗೂ ಮಿಸ್ಸಿಪ್ಪಿಯ ಅನೇಕ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ. ಚಂಡ ಮಾರುತದ ಬಳಿಕ ರಾಷ್ಟ್ರೀಯ ಹವಾಮಾನ ಇಲಾಖೆಯು ಜೀವಕ್ಕೆ ಹಾನಿ ಉಂಟು ಮಾಡಬಲ್ಲ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿತ್ತು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆದಿದ್ದು ಮರದ ನಡುವೆ ಸಿಲುಕಿದ್ದ ಹಸುವನ್ನು ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಸುವು ಮರದ ಎರಡು ಕೊಂಬೆಗಳ ನಡುವೆ ಸಿಲುಕಿಕೊಂಡಿತ್ತು. ತಪ್ಪಿಸಿಕೊಳ್ಳಲು ಆಗದೇ ಹರಸಾಹಸ ಪಡುತ್ತಿದ್ದ ಹಸುವನ್ನು ರಕ್ಷಿಸಲಾಗಿದೆ. ಮರದ ಕೊಂಬೆಯನ್ನು ಕಡಿದು ಹಸುವನ್ನು ರಕ್ಷಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

— Sky News (@SkyNews) September 1, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...