alex Certify ಟ್ರಾಕ್ಟರ್ ಗೆ ಬಸ್ ಡಿಕ್ಕಿಯಾಗಿ ಘೋರ ದುರಂತ: 6 ಕಾರ್ಮಿಕರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಕ್ಟರ್ ಗೆ ಬಸ್ ಡಿಕ್ಕಿಯಾಗಿ ಘೋರ ದುರಂತ: 6 ಕಾರ್ಮಿಕರು ಸಾವು

ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಟ್ರಾಕ್ಟರ್ ಟ್ರಾಲಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ರೋಡ್‌ ವೇಸ್ ಬಸ್ ಪ್ರಯಾಗ್‌ ರಾಜ್‌ನಿಂದ ಜಾನ್‌ಪುರಕ್ಕೆ ತೆರಳುತ್ತಿತ್ತು.

ಭಾನುವಾರ ರಾತ್ರಿ 11.15ರ ಸುಮಾರಿಗೆ ಸಮದ್‌ಗಂಜ್ ಬಳಿ ಅಪಘಾತ ಸಂಭವಿಸಿದೆ. ಪೊಲೀಸರ ಪ್ರಕಾರ, ಮೃತಪಟ್ಟ ಆರು ಮಂದಿಯಲ್ಲಿ ಐವರು ಸ್ಥಳದಲ್ಲೇ ಮತ್ತು ಆರನೆಯವರು ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ಟ್ರ್ಯಾಕ್ಟರ್ ಟ್ರಾಲಿಯಲ್ಲಿ 12 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಸಂತ್ರಸ್ತರೆಲ್ಲರೂ ಅಲಿಶಾಪುರ ಗ್ರಾಮದವರು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಎಲ್ಲಾ ಕಾರ್ಮಿಕರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...