alex Certify Viral Video: ರೈಲು ಬರುತ್ತಿರುವಾಗಲೇ ಟ್ರ್ಯಾಕ್ ದಾಟುತ್ತಿದ್ದ ಮಹಿಳೆ; ಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ಅನಾಹುತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ರೈಲು ಬರುತ್ತಿರುವಾಗಲೇ ಟ್ರ್ಯಾಕ್ ದಾಟುತ್ತಿದ್ದ ಮಹಿಳೆ; ಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ಅನಾಹುತ

ರೈಲು ಹಳಿ ದಾಟುತ್ತಿರುವಾಗ ಜೀವ ಹಾನಿಯಂತಹ ಸಾಕಷ್ಟು ಅನಾಹುತಗಳು ಈಗಾಗಲೇ ಸಂಭವಿಸಿದ್ದರೂ ಸಹ ಜನ, ಜಾಗ್ರತೆ ಮಾತ್ರ ವಹಿಸುತ್ತಿಲ್ಲ. ಇಂತಹ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ ಸಹ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದೀಗ ನಿರ್ಲಕ್ಷ್ಯ ಪ್ರಕರಣದ ಮತ್ತೊಂದು ವಿಡಿಯೋ ಹರಿದಾಡುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಶಿಖೋಬಾದ್ ರೈಲು ನಿಲ್ದಾಣದ ಬಳಿ ನಡೆದಿದ್ದು, ಕೈಯಲ್ಲಿ ಬ್ಯಾಗ್ ಹಿಡಿದ ಮಹಿಳೆಯೊಬ್ಬಳು ರೈಲು ಹಳಿ ದಾಟಲು ಪ್ರಯತ್ನಿಸಿದ್ದಾಳೆ. ತನ್ನ ಬ್ಯಾಗ್ ಅನ್ನು ಫ್ಲಾಟ್ ಫಾರ್ಮ್ ಮೇಲೆ ಇಟ್ಟ ಆಕೆ ಮೇಲೆರಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಇದೇ ಸಂದರ್ಭದಲ್ಲಿ ವೇಗವಾಗಿ ರೈಲು ಬರುತ್ತಿರುವುದನ್ನು ಗಮನಿಸಿದ ಆಕೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಇದನ್ನು ಗಮನಿಸಿ ಕೂಡಲೇ ಧಾವಿಸಿದ ಸ್ಟೇಷನ್ ಸಿಬ್ಬಂದಿ ಆಕೆಯನ್ನು ಮೇಲೆ ಎಳೆದುಕೊಂಡಿದ್ದಾರೆ.

ಆದರೆ ಇಷ್ಟಾದರೂ ಸಹ ಮಹಿಳೆ ತನ್ನ ಬ್ಯಾಗ್ ನಿಂದ ಬಿದ್ದ ಬಾಟಲಿ ತೆಗೆದುಕೊಳ್ಳಲು ಮತ್ತೆ ಕೈಚಾಚಿದ್ದು ವೇಗವಾಗಿ ಬಂದ ರೈಲು ಕೂದಲೆಳೆ ಅಂತರದಲ್ಲಿ ಹಾದು ಹೋಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯ ನಿರ್ಲಕ್ಷಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...