alex Certify ಕ್ಷುಲ್ಲಕ ಕಾರಣಕ್ಕೆ ಫೋನ್​ ಪುಡಿ ಮಾಡಿದ ಸೇನಾ ಸಿಬ್ಬಂದಿ: ಆಕ್ರೋಶಗೊಂಡ ನರ್ಸ್ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುಲ್ಲಕ ಕಾರಣಕ್ಕೆ ಫೋನ್​ ಪುಡಿ ಮಾಡಿದ ಸೇನಾ ಸಿಬ್ಬಂದಿ: ಆಕ್ರೋಶಗೊಂಡ ನರ್ಸ್ ಮಾಡಿದ್ದೇನು ಗೊತ್ತಾ…?

ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ನರ್ಸ್​ ಹಾಗೂ ಯೋಧ ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆಯು ಮಧ್ಯ ಪ್ರದೇಶದ ಭಿಂದ್​ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಘಟನೆ ಸಂಬಂಧ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

BREAKING: 68 ವರ್ಷಗಳ ಬಳಿಕ ಕೊನೆಗೂ ಟಾಟಾ ಸನ್ಸ್​ ತೆಕ್ಕೆಗೆ ಮರಳಿದ ಏರ್​ ಇಂಡಿಯಾ – ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ

ಜಿತೇಂದ್ರ ಎಂಬ ವ್ಯಕ್ತಿಯು ತನ್ನ ಸಂಬಂಧಿಯೊಬ್ಬರನ್ನು ಇದೇ ಆಸ್ಪತ್ರೆಗೆ ದಾಖಲು ಮಾಡಿದ್ದರು. ರೋಗಿಗೆ ಪುರುಷರ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನರ್ಸ್ ಆಶಾ ಪನ್ಸೆ ಕರ್ತವ್ಯದಲ್ಲಿದ್ದರು. ಜೀತೇಂದ್ರ ರೋಗಿಗೆ ವೈದ್ಯಕೀಯ ನೆರವು ನೀಡುವಂತೆ ಪದೇ ಪದೇ ಕೇಳುತ್ತಿದ್ದರಿಂದ ಆಶಾ ರೋಗಿಗೆ ಗ್ಲುಕೋಸ್​ ಬಾಟಲಿ ಏರಿಸಿದ್ದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರೋದಾಗಿ ಹೇಳಿಕೊಂಡಿರುವ ಜೀತೇಂದ್ರ ಆಶಾ ಬಳಿಕ ಪದೇ ಪದೇ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಹೇಳುತ್ತಲೇ ಇದ್ದರು. ಈ ವೇಳೆ ಆಶಾ ಫೋನಿನಲ್ಲಿ ಬೇರೆಯವರ ಜೊತೆ ಮಾತನಾಡುತ್ತಿರೋದನ್ನು ಗಮನಿಸಿದ ಜೀತೇಂದ್ರ ಮೊಬೈಲ್​​ ಕಸಿದು ಅದನ್ನು ಪುಡಿ ಪುಡಿ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ನರ್ಸ್​ ಜೀತೇಂದ್ರ ಕೆನ್ನೆಗೆ ಬಾರಿಸಿದ್ದಾರೆ.

ಸ್ಮಾರ್ಟ್ ಆಗಿ ಕೆಲಸ ಶುರು ಮಾಡಿ ಕೈ ತುಂಬ ಗಳಿಸಿ

ಇದಾದ ಬಳಿಕ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಕೋಪಗೊಂಡ ನರ್ಸ್​ ಜೀತೇಂದ್ರರಿ​ಗೆ ಚಪ್ಪಲಿಯಿಂದ ಬಾರಿಸಿದ್ದಾಳೆ. ಜೀತೇಂದ್ರ ಕೂಡ ನರ್ಸ್​ ಕತ್ತು ಹಿಸುಕಲು ಯತ್ನಿಸಿದ್ದಾರೆ.

ನರ್ಸ್​ ಆಶಾ ವೈದ್ಯರ ಜೊತೆಗೆ ಪೊಲೀಸ್​ ಠಾಣೆಗೆ ಆಗಮಿಸಿದ್ದರು. ಆದರೆ ಇಬ್ಬರ ನಡುವೆ ರಾಜಿ ಸಂಧಾನ ಮಾಡಲಾಗಿದೆ. ಹೀಗಾಗಿ ಆಶಾ ಯಾವುದೇ ಎಫ್​ಐಆರ್​ ದಾಖಲಿಸದೇ ಇಲ್ಲಿಂದ ತೆರಳಿದ್ದಾರೆ ಎಂದು ಎಸ್​ಐ ರಾಜಕುಮಾರ್​ ಶರ್ಮಾ ಹೇಳಿದರು.

Watch video: Nurse beats up 'army man' after a dispute over giving medicine  to patient in MP Bhind

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...