alex Certify BREAKING: 68 ವರ್ಷಗಳ ಬಳಿಕ ಕೊನೆಗೂ ಟಾಟಾ ಸನ್ಸ್​ ತೆಕ್ಕೆಗೆ ಮರಳಿದ ಏರ್​ ಇಂಡಿಯಾ – ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: 68 ವರ್ಷಗಳ ಬಳಿಕ ಕೊನೆಗೂ ಟಾಟಾ ಸನ್ಸ್​ ತೆಕ್ಕೆಗೆ ಮರಳಿದ ಏರ್​ ಇಂಡಿಯಾ – ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ

ಯಾರ ಪಾಲಾಗಲಿದ್ದಾನೆ ‘ಮಹಾರಾಜ’ ಎಂಬ ಬಿಲಿಯನ್ ಡಾಲರ್​ ಪ್ರಶ್ನೆಗೆ ಕೊನೆಗೂ ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಸರ್ಕಾರದ ಅಧೀನಲ್ಲಿರುವ ಏರ್​ ಇಂಡಿಯಾ ಕಂಪನಿಯು ಟಾಟಾ ಗ್ರೂಪ್​​ ಪಾಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ಬರೋಬ್ಬರಿ 68 ವರ್ಷಗಳ ಬಳಿಕ ಏರ್​ ಇಂಡಿಯಾ ಟಾಟಾ ಸನ್ಸ್​ ತೆಕ್ಕೆಗೆ ಮರಳಿದಂತಾಗಿದೆ.

ಕೇಂದ್ರ ಸರ್ಕಾರದ ಪಾಲಿಗೆ ಬಿಳಿಯಾನೆಯಂತಾಗಿದ್ದ ಏರ್​ ಇಂಡಿಯಾದ 100 ಪ್ರತಿಶತ ಷೇರುಗಳನ್ನ ಮಾರಾಟ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಏರ್​ ಇಂಡಿಯಾ ಕಂಪನಿಯು ಬಿಡ್ಡಿಂಗ್​​ನಲ್ಲಿ ಗೆಲುವು ಸಾಧಿಸಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಅಂದಹಾಗೆ ಟಾಟಾ ಸನ್ಸ್​ 18 ಸಾವಿರ ಕೋಟಿ ರೂಪಾಯಿಗಳಿಗೆ ಬಿಡ್ಡಿಂಗ್​ ಮಾಡಿತ್ತು.

ಏರ್​ ಇಂಡಿಯಾವನ್ನು ಖರೀದಿ ಮಾಡಲು 7 ಕಂಪನಿಗಳು ಮುಂದಾಗಿದ್ದವು. ಈ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವವನ್ನು ಏರ್​​ ಇಂಡಿಯಾ ಉದ್ದೇಶಿತ ಪರ್ಯಾಯ ಕಾರ್ಯ ನಿರ್ವಹಣಾ ಸಂಸ್ಥೆಯು ಪರಿಶೀಲನೆ ಮಾಡಿತ್ತು. ಇದೇ ತಂಡವು ಏರ್​ ಇಂಡಿಯಾ ವನ್ನು ಟಾಟಾ ಸನ್ಸ್​​ಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದೆ. ಸದ್ಯ ಏರ್​ ಇಂಡಿಯಾ ಮಾಲೀಕತ್ವ ವಾಪಸ್​ ಪಡೆದಿರುವ ಟಾಟಾ ಸನ್ಸ್​ ಹೆಗಲ ಮೇಲೆ 15,300 ಕೋಟಿ ರೂಪಾಯಿ ಸಾಲದ ಹೊರೆ ಕೂಡ ಬಿದ್ದಿದೆ ಎಂಬ ಮಾತನ್ನು ಕಡೆಗಣಿಸುವಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...