alex Certify ಪತ್ರಕರ್ತರ ಆನ್​ಲೈನ್​ ಮೀಟಿಂಗ್​ನಲ್ಲಿ ಬಿಯರ್​ ಕ್ಯಾನ್ಸ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ರಕರ್ತರ ಆನ್​ಲೈನ್​ ಮೀಟಿಂಗ್​ನಲ್ಲಿ ಬಿಯರ್​ ಕ್ಯಾನ್ಸ್​…!

ನವದೆಹಲಿ: ವರ್ಚುವಲ್​ ಮೀಟಿಂಗ್​ ಸಂದರ್ಭಗಳಲ್ಲಿ ಹಾಗೂ ಆನ್​ಲೈನ್​ ಸಭೆಗಳು, ತರಗತಿಗಳ ಸಂದರ್ಭದಲ್ಲಿ ನಡೆದ ಹಲವಾರು ಆಸಕ್ತಿಕರ ವಿಷಯಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ. ಅದರಲ್ಲಿಯೂ ಕೋವಿಡ್​ ಸಂದರ್ಭದಲ್ಲಿ ಆಗಿರುವ ಫಜೀತಿಗಳು ಅಷ್ಟಿಷ್ಟಲ್ಲ.

ಈಗ ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಲಾಲನ್‌ಟಾಪ್ ಸಂಪಾದಕ ಸೌರಭ್ ದ್ವಿವೇದಿ ಅವರು ತಮ್ಮ ಸಂಪಾದಕೀಯ ಸಿಬ್ಬಂದಿಯೊಂದಿಗೆ ಸಂಭಾಷಣೆಯಲ್ಲಿದ್ದಾಗ ನಡೆದ ಘಟನೆ ಇದಾಗಿದೆ.

ಸಭೆಯಲ್ಲಿ ಪತ್ರಕರ್ತ ಗೌರವ್ ಎಂಬುವವರೂ ಇದ್ದರು. ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರ ಹಿನ್ನೆಲೆಯಲ್ಲಿ ನಡೆದ ಘಟನೆಯಿಂದ ಈ ವಿಡಿಯೋ ಸಾಕಷ್ಟು ಸುದ್ದಿ ಮಾಡುತ್ತಿದೆ.

ಅದೇನೆಂದರೆ, ಮೀಟಿಂಗ್​ ನಡೆಯುತ್ತಿರುವ ವೇಳೆ, ಗೌರವ್ ಅವರ ಪರದೆಯು ಹಿಂದೆ ಹಲವಾರು ಬಿಯರ್ ಕ್ಯಾನ್‌ಗಳನ್ನು ಹಿಡಿದಿರುವ ವ್ಯಕ್ತಿ ಕಂಡುಬಂದಿದ್ದಾನೆ. ಅವುಗಳನ್ನು ಫ್ರಿಜ್​ನಲ್ಲಿ ಇಡಲು ಡೋರ್​ ಓಪನ್​ ಮಾಡಿರುವುದನ್ನು ನೋಡಬಹುದು. ಇದು ಬಹಳ ವೈರಲ್​ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...